General Knowledge

2020 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಇಲ್ಲಿದೆ ಪುರಸ್ಕೃರ ಪಟ್ಟಿ

 2020 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಇಲ್ಲಿದೆ ಪುರಸ್ಕೃತರ ಪಟ್ಟಿ


# ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ :
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ 1ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, 25 ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.

# ರಾಜ್ಯೋತ್ಸವ ಪ್ರಶಸ್ತಿ ಇತಿಹಾಸ :
ರಾಜ್ಯೋತ್ಸವ ಪ್ರಶಸ್ತಿಯನ್ನು 1966ರಿಂದ ಕೊಡಲು ಪ್ರಾರಂಭಿಸಲಾಯಿತು.

ಸಾಮಾನ್ಯವಾಗಿ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ: ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.

ಆದರೆ, 2007ನೇ ವರ್ಷದ ಪ್ರಶಸ್ತಿಯನ್ನು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಕಾರಣ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ್ ಥಾಕೂರ್ ಪ್ರದಾನ ಮಾಡಿದ್ದರು. ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ. 1985ರ ವರ್ಷ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು 2008ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.

ಕನ್ನಡ ರಾಜ್ಯೋತ್ಸವದ 65ನೇ ವರ್ಷಾಚರಣೆ ಸಂದರ್ಭದಲ್ಲಿ 65 ಮಂದಿ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿದೆ. ನಾಟ್ಯ ವಿಧೂಷಿ ಜ್ಯೋತಿ ಪಟ್ಟಾಭಿರಾಮ್, ಸಾಹಿತಿ ರಾಮಣ್ಣ ಬ್ಯಾಟಿ ಸೇರಿದಂತೆ ಒಟ್ಟು 65 ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

# 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤ ಸಾಹಿತ್ಯ ಕ್ಷೇತ್ರ: ಧಾರವಾಡ ಜಿಲ್ಲೆಯ ಪ್ರೊ.ಸಿ.ಪಿ.ಸಿದ್ದಾಶ್ರಮ, ಕೋಲಾರ ಜಿಲ್ಲೆಯ ವಿ.ಮುನಿವೆಂಕಟಪ್ಪ, ಗದಗ ಜಿಲ್ಲೆಯ ರಾಮಣ್ಣ ಬ್ಯಾಟಿ (ವಿಶೇಷ ಚೇತನ), ದಕ್ಷಿಣ ಕನ್ನಡ ಜಿಲ್ಲೆಯ ವಲೇರಿಯನ್ ಡಿಸೋಜ (ವಲ್ಲಿವಗ್ಗ), ಯದಗಿರಿ ಜಿಲ್ಲೆಯ ಡಿ.ಎನ್.ಅಕ್ಕಿ.

➤ ಸಂಗೀತ ಕ್ಷೇತ್ರ: ರಾಯಚೂರು ಜಿಲ್ಲೆಯ ಅಂಬಯ್ಯ ನೂಲಿ, ಬೆಳಗಾವಿ ಜಿಲ್ಲೆಯ ಅನಂತ ತೇರದಾಳ, ಬೆಂಗಳೂರು ನಗರದ ಬಿ.ವಿ.ಶ್ರೀನಿವಾಸ್, ಗಿರಿಜಾ ನಾರಾಯಣ, ದಕ್ಷಿಣ ಕನ್ನಡದ ಕೆ.ಲಿಂಗಪ್ಪ ಶರಿಗಾರ ಕಟೀಲು.

➤ಮಾಧ್ಯಮ: ಮೈಸೂರಿನ ಸಿ.ಮಹೇಶ್ವರನ್, ಬೆಂಗಳೂರಿನ ಟಿ.ವೆಂಕಟೇಶ್ ( ಈ ಸಂಜೆ ಪತ್ರಿಕೆಯ ಸಂಪಾದಕರು).

➤ ನ್ಯಾಯಾಂಗ: ಬೆಂಗಳೂರಿನ ಕೆ.ಎನ್.ಭಟ್, ಉಡುಪಿಯ ಎಂ.ಕೆ.ವಿಜಯಕುಮಾರ್.

➤ ಯೋಗ: ಮೈಸೂರಿನ ಡಾ.ಎ.ಎಸ್.ಚಂದ್ರಶೇಖರ್

➤ ಶಿಕ್ಷಣ: ಚಿಕ್ಕಮಗಳೂರು ಜಿಲ್ಲೆಯ ಎಂ.ಎನ್.ಷಡಕ್ಷರಿ, ಚಾಮರಾಜನಗರದ ಡಾ.ಆರ್.ರಾಮಕೃಷ್ಣ, ದಾವಣಗೆರೆಯ ಡಾ.ಎಂ.ಜಿ.ಈಶ್ವರಪ್ಪ, ಬೆಳಗಾವಿಯ ಅಶೋಕ್ ಶೆಟ್ಟರ್, ಗದಗ ಜಿಲ್ಲೆಯ ಡಿ.ಎಸ್.ದಂಡಿನ್.

➤ ಹೊರನಾಡು ಕನ್ನಡಿಗ: ದಕ್ಷಿಣ ಕನ್ನಡ ಜಿಲ್ಲೆ ಮೂಲದ ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ, ಮಹಾರಾಷ್ಟ್ರ ರಾಜ್ಯದ ಮುಂಬೈನ ಮುಲುಂಡದ ವಿದ್ಯಾ ಸಿಂಹಾಚಾರ್ಯ ಮಾಹುಲಿ.

➤ ಕ್ರೀಡೆ: ತುಮಕೂರು ಜಿಲ್ಲೆಯ ಎಚ್.ಬಿ.ನಂಜೇಗೌಡ, ಬೆಂಗಳೂರು ನಗರದ ಉಷಾರಾಣಿ.

➤ ಸಂಕೀರ್ಣ: ಕೋಲಾರ ಜಿಲ್ಲೆಯ ಡಾ.ಕೆ.ವಿ.ರಾಜು, ಹಾಸನದ ನಂ.ವೆಂಕೋಬರಾವ್, ಮಂಡ್ಯದ ಡಾ.ಕೆ.ಎಸ್.ರಾಜಣ್ಣ (ವಿಶೇಷ ಚೇತನ) ಹಾಗೂ ಮಂಡ್ಯದ ವಿ.ಲಕ್ಷ್ಮೀನಾರಾಯಣ (ನಿರ್ಮಾಣ್).

➤ ಸಂಘ-ಸಂಸ್ಥೆ: ಬೆಂಗಳೂರು ನಗರದ ಯೂತ್ ಫಾರ್ ಸೇವಾ ಹಾಗೂ ಬೆಟರ್ ಇಂಡಿಯಾ, ಬಳ್ಳಾರಿಯ ದೇವದಾಸಿ ಸ್ವಾವಲಂಬನ ಕೇಂದ್ರ, ಬೆಂಗಳೂರ ಗ್ರಾಮಾಂತರ ಜಿಲ್ಲೆಯ ಯುವ ಬ್ರಿಗೇಡ್, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಧರ್ಮೋತ್ತಾನ ಟ್ರಸ್ಟ್.

➤ ಸಮಾಜ ಸೇವೆ: ಉತ್ತರ ಕನ್ನಡ ಜಿಲ್ಲೆಯ ಎನ್.ಎಸ್.(ಕುಂದರಗಿ)ಹೆಗಡೆ, ಚಿಕ್ಕಮಗಳೂರಿನ ಪ್ರೇಮಾ ಕೋದಂಡರಾಮ ಶ್ರೇಷ್ಠಿ ಹಾಗೂ ಮೋಹಿನಿ ಸಿದ್ದೇಗೌಡ, ಉಡುಪಿಯ ಮಣೆಗಾರ್ ಮೀರಾನ್ ಸಾಹೇಬ್. 

Thanks for Reading and Keep Visiting our website for more updates.

Tags : General Knowledge

ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು

 ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು


1. ಗ್ರಾಮಿ ಪ್ರಶಸ್ತಿ – ಸಂಗೀತ
2. ಟ್ಯಾನ್ಸೆನ್ ಪ್ರಶಸ್ತಿ – ಸಂಗೀತ
3. ಮ್ಯಾಗ್ಸೆಸೆ ಪ್ರಶಸ್ತಿ – ಸಾರ್ವಜನಿಕ ಸೇವೆ
4. ಮ್ಯಾನ್ ಬುಕರ್ ಪ್ರಶಸ್ತಿ – ಕಾದಂಬರಿಗಳ ಲೇಖಕರು
5. ಪುಲಿಟ್ಜರ್ – ಪತ್ರಿಕೋದ್ಯಮ ಮತ್ತು ಸಾಹಿತ್ಯ
6. ಭಾರತೀಯ ಜ್ಞಾನಪೀಠ ಪ್ರಶಸ್ತಿ – ಸಾಹಿತ್ಯ
7. ಭಾರತ್ ರತ್ನ- ಕಲೆ, ವಿಜ್ಞಾನ, ಸಾರ್ವಜನಿಕ ಸೇವೆಗಳು, ಕ್ರೀಡೆ
8. ಕಳಿಂಗ ಪ್ರಶಸ್ತಿ – ವಿಜ್ಞಾನ
9. ಧನ್ವಂತ್ರಿ ಪ್ರಶಸ್ತಿ – ವೈದ್ಯಕೀಯ ವಿಜ್ಞಾನ
10. ಭಟ್ನಾಗರ್ ಪ್ರಶಸ್ತಿ – ವಿಜ್ಞಾನ

11. ನೊಬೆಲ್ ಪ್ರಶಸ್ತಿ – ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ
12. ಶೌರ್ಯ ಚಕ್ರ – ನಾಗರಿಕ ಅಥವಾ ಮಿಲಿಟರಿ
13. ಅಶೋಕ್ ಚಕ್ರ – ನಾಗರಿಕರು
14. ಪರಮ ವೀರ ಚಕ್ರ – ಮಿಲಿಟರಿ
15. ಕಾಳಿದಾಸ ಸಮ್ಮಾನ್ – ಕ್ಲಾಸಿಕಲ್ ಮ್ಯೂಸಿಕ್
16. ವ್ಯಾಸ್ ಸಮ್ಮಾನ್ – ಸಾಹಿತ್ಯ
17. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಸಾಹಿತ್ಯ
18. ಆರ್.ಡಿ.ಬಿರ್ಲಾ ಅವಾರ್ಡ್ – ಮೆಡಿಕಲ್ ಸೈನ್ಸ್
19. ಲೆನಿನ್ ಶಾಂತಿ ಪ್ರಶಸ್ತಿ – ಶಾಂತಿ ಮತ್ತು ಸ್ನೇಹ
20. ಜೂಲಿಯೆಟ್ ಕ್ಯೂರಿ ಪ್ರಶಸ್ತಿ: ಶಾಂತಿ

21. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಭಾರತೀಯ ಭಾಷೆಗಳು ಮತ್ತು ಇಂಗ್ಲೀಷ್ ಪುಸ್ತಕಗಳು
22. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ – ವಿಜ್ಞಾನ ಮತ್ತು ತಂತ್ರಜ್ಞಾನ
23. ಲಲಿತ್ ಕಲಾ ಅಕಾಡೆಮಿ ಪ್ರಶಸ್ತಿ – ಕಲೆ
24. ರಾಜೀವ್ ಗಾಂಧಿ ಖೇಲ್ ರತ್ನ – ಕ್ರೀಡೆ (ಆಟಗಾರರು)
25. ದ್ರೋಣಾಚಾರ್ಯ ಪ್ರಶಸ್ತಿ -ಕ್ರೀಡೆ ತರಬೇತುದಾರರು
26. ಧ್ಯಾನ್ ಚಂದ್ – ಕ್ರೀಡೆ
27. ಏಕಲವ್ಯ ಪ್ರಶಸ್ತಿ – ಕ್ರೀಡೆ
28. ಕೋಲಂಕಾ ಕಪ್ – ಕ್ರೀಡೆ
29. ಏಕಲವ್ಯ ಪ್ರಶಸ್ತಿ – ಕ್ರೀಡೆ
30. ಅರ್ಜುನ ಪ್ರಶಸ್ತಿ – ಕ್ರೀಡೆ

31. ಮಹಾರಾಜ ರಂಜಿತ್ ಸಿಂಗ್ ಪ್ರಶಸ್ತಿ – ಕ್ರೀಡೆ
32. ಆಸ್ಕರ್ – ಚಲನಚಿತ್ರ
33. ದಾದಾ ಸಾಹಿಬ್ ಫಾಲ್ಕೆ – ಚಲನಚಿತ್ರ
34. ನಂದಿ ಪ್ರಶಸ್ತಿಗಳು – ಸಿನಿಮಾ
35. ಸ್ಕ್ರೀನ್ ಪ್ರಶಸ್ತಿಗಳು – ಸಿನಿಮಾ 

Thanks for Reading and Keep Visiting our website for more updates

Tags : General Knowledge

ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ‌ ಪಟ್ಟಿ

 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ


ಭಾರತದ ಈ ಕೆಳಕಂಡ 24 ಭಾಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ. ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು 1954ರಲ್ಲಿ ಸ್ಥಾಪಿಸಲಾಯಿತು.

ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ 1955ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.

ಅಸ್ಸಾಮಿ, ಬಂಗಾಳಿ, ಬೋಡೋ, ಇಂಗ್ಲಿಷ್, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಷ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಹಾಗು ಉರ್ದು ಭಾಷೆಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀದಲ್ಲಾಗುತ್ತದೆ.

ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಕಾರ್ಯ ಸುಮಾರು 12 ತಿಂಗಳು ನಡೆಯುತ್ತದೆ. ವಿಜೇತರಿಗೆ 1 ಲಕ್ಷ ರೂ ನಗದು ಹಾಗು ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ. ಭಾರತೀಯ ಭಾಷೆಗಳ ಉತ್ತಮ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

# ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ :
1. 1955 – ಶ್ರೀ ರಾಮಾಯಣ ದರ್ಶನಂ – ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
2. 1956 – ಕನ್ನಡ ಸಾಹಿತ್ಯ ಚರಿತ್ರೆ – ರಂಗನಾಥ ಶ್ರೀನಿವಾಸ ಮುಗಳಿ
3. 1958 – ಅರಳು ಮರಳು – ದತ್ತಾತ್ರೇಯ ರಾಮಚಂದ್ರ ಬೇಂದ್ರೆ
4. 1959 – ಯಕ್ಷಗಾನ ಬಯಲಾಟ – ಕೆ.ಶಿವರಾಮ ಕಾರಂತ
5. 1960 – ದ್ಯಾವಾ ಪೃಥಿವಿ – ವಿ.ಕೃ.ಗೋಕಾಕ
6. 1961 – ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ – ಎ.ಆರ್.ಕೃಷ್ಣಶಾಸ್ತ್ರಿ
7. 1962 – ಮಹಾಕ್ಷತ್ರಿಯ – ದೇವುಡು ನರಸಿಂಹಶಾಸ್ತ್ರಿ
8. 1964 – ಕ್ರಾಂತಿ ಕಲ್ಯಾಣ – ಬಿ. ಪುಟ್ಟಸ್ವಾಮಯ್ಯ
9. 1965 – ರಂಗ ಬಿನ್ನಪ (Philosophical reflections) – ಎಸ್.ವಿ.ರಂಗಣ್
10. 1966 – ಹಂಸ ದಮಯಂತಿ ಮತ್ತು ಇತರ ರೂಪಕಗಳು (Musical plays) – ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್

11. 1967 – ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) – ಡಿ.ವಿ.ಜಿ.
12. 1968 – ಸಣ್ಣ ಕತೆಗಳು (12-13) – ಮಾಸ್ತಿ ವೆಂಕಟೇಶ ಅಯ್ಯಂಗಾರ್
13. 1969 – ಕರ್ನಾಟಕ ಸಂಸ್ಕೃತಿ ಸಮೀಕ್ಷೆ (Cultural study) – ಹೆಚ್. ತಿಪ್ಪೇರುದ್ರಸ್ವಾಮಿ
14. 1970 – ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (Cultural study) – ಎಸ್.ಬಿ.ಜೋಷಿ
15. 1971 – ಕಾಳಿದಾಸ (Literary criticism) – ಆದ್ಯ ರಂಗಾಚಾರ್ಯ
16. 1972 – ಶೂನ್ಯ ಸಂಪಾದನೆಯ ಪರಾಮರ್ಶೆ (Commentary) – ಎಸ್.ಎಸ್.ಭೂಸನೂರಮಠ
17. 1973 – ಅರಲು ಬರಲು (Poetry) – ವಿ. ಸೀತಾರಾಮಯ್ಯ
18. 1974 – ವರ್ಧಮಾನ (Poetry) – ಗೋಪಾಲಕೃಷ್ಣ ಅಡಿಗ
19. 1975 – ದಾಟು (Novel) – ಎಸ್.ಎಲ್.ಭೈರಪ್ಪ
20. 1976 – ಮನ ಮಂಥನ (Psychiatric studies) – ಎಂ. ಶಿವರಾಂ

21. 1977 – ತೆರೆದ ಬಾಗಿಲು (Poetry) – ಕೆ.ಎಸ್.ನರಸಿಂಹಸ್ವಾಮಿ
22. 1978 – ಹಸಿರು ಹೊನ್ನು (Travelogue) – ಬಿ.ಜಿ.ಎಲ್.ಸ್ವಾಮಿ
23. 1979 – ಚಿತ್ರಗಳು ಪತ್ರಗಳು – ಎ.ಎನ್.ಮೂರ್ತಿರಾವ್
24. 1980 – ಅಮೆರಿಕದಲ್ಲಿ ಗೊರೂರು (Travelogue) – ಗೊರೂರು ರಾಮಸ್ವಾಮಿ ಅಯ್ಯಂಗಾರ್
25. 1981 – ಜೀವ ಧ್ವನಿ (Poetry) – ಚನ್ನವೀರ ಕಣವಿ
26. 1982 – ವೈಶಾಖ (Novel) – ಚದುರಂಗ
27. 1983 – ಕಥೆಯಾದಳು ಹುಡುಗಿ (Short stories) – ಯಶವಂತ ಚಿತ್ತಾಲ
28. 1984 – ಕಾವ್ಯಾರ್ಥ ಚಿಂತನ (Literary criticism) – ಜಿ.ಎಸ್.ಶಿವರುದ್ರಪ್ಪ
29. 1985 – ದುರ್ಗಾಸ್ತಮಾನ (Novel) – ತ.ರಾ.ಸು.
30. 1986 – ಬಂಡಾಯ (Novel) – ವ್ಯಾಸರಾಯ ಬಲ್ಲಾಳ್

31. 1987 – ಚಿದಂಬರ ರಹಸ್ಯ (Novel) – ಕೆ.ಪಿ.ಪೂರ್ಣಚಂದ್ರ ರಹಸ್ಯ
32. 1988 – ಅವಧೇಶ್ವರಿ (novel) – ಶಂಕರ ಮೊಕಾಶಿ ಪುಣೇಕರ್
33. 1989 – ಸಂಪ್ರತಿ (Belles Lettres) – ಹಾ.ಮಾ.ನಾಯಕ
34. 1990 – ಕುಸುಮ ಬಾಲೆ (Novel) – ದೇವನೂರ ಮಹಾದೇವ
35. 1991 – ಸಿರಿ ಸಂಪಿಗೆ (Play) – ಚಂದ್ರಶೇಖರ ಕಂಬಾರ
36. 1992 – ಬಕುಳದ ಹೂವುಗಳು (Poetry) – ಎಸ್.ಆರ್.ಎಕ್ಕುಂಡಿ
37. 1993 – ಕಲ್ಲು ಕರಗುವ ಸಮಯ (Short stories) – ಪಿ. ಲಂಕೇಶ್
38. 1994 – ತಲೆ ದಂಡ (play) – ಗಿರೀಶ್ ಆರ್.ಕಾರ್ನಾಡ್
39. 1995 – ಉರಿಯ ನಾಲಗೆ (Criticism) – ಕೀರ್ತಿನಾಥ ಕುರ್ತಕೋಟಿ
40. 1996 – ಭುವನದ ಭಾಗ್ಯ (Literary Criticism) – ಜಿ.ಎಸ್.ಆಮೂರ್

41. 1997 – ಹೊಸತು ಹೊಸತು (Criticism) – ಎಂ. ಚಿದಾನಂದ ಮೂರ್ತಿ
42. 1998 – ಸಪ್ತಪದಿ (Poetry) – ಬಿ.ಸಿ.ರಾಮಚಂದ್ರ ಶರ್ಮ
43. 1999 – ಸಾಹಿತ್ಯ ಕಥನ (Essays) – ಡಿ.ಆರ್.ನಾಗರಾಜ್
44. 2000 – ಓಂ ನಮೋ (Novel) – ಶಾಂತಿನಾಥ ಕುಬೇರಪ್ಪ ದೇಸಾಯಿ
45. 2001 – ಇಂಗ್ಲಿಷ್ ಸಾಹಿತ್ಯ ಚರಿತ್ರೆ (Literary history) – ಎಲ್.ಎಸ್.ಶೇಷಗಿರಿರಾವ್
46. 2002 – ಯುಗಸಂಧ್ಯಾ (Epic) – ಸುಜನಾ ( ಎಸ್.ನಾರಾಯಣ ಶೆಟ್ಟಿ)
47. 2003 – ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು (Essays) – ಕೆ.ವಿ.ಸುಬ್ಬಣ್ಣ
48. 2004 – ಬದುಕು (Novel) – ಗೀತಾ ನಾಗಭೂಷಣ
49. 2005 – ತೇರು (Novel) – ರಾಘವೇಂದ್ರ ಪಾಟೀಲ
50. 2006 – ಮಾರ್ಗ-4 (Essays) – ಎಂ.ಎಂ.ಕಲಬುರ್ಗಿ

51. 2007 – ಅರಮನೆ – ಕುಂ. ವೀರಭದ್ರಪ್ಪ
52. 2008 – ಹಳ್ಳ ಬಂತು ಹಳ್ಳ – ಶ್ರೀನಿವಾಸ ವೈದ್ಯ
53. 2009 – ಕ್ರೌಂಚ ಪಕ್ಷಿಗಳು – ವೈದೇಹಿ
54. 2010 – ಕತ್ತಿಯಂಚಿನ ದಾರಿ – ರಹಮತ್ ತರೀಕೆರೆ
55. 2011 – ಸ್ವಪ್ನ ಸಾರಸ್ವತ – ಗೋಪಾಲಕೃಷ್ಣ ಪೈ
56. 2012-ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ) – ಎಚ್. ಎಸ್. ಶಿವಪ್ರಕಾಶ್
57. 2013-ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ)- ಸಿ. ಎನ್. ರಾಮಚಂದ್ರನ್
58. 2014-ಉತ್ತರಾರ್ಧ (ಪ್ರಬಂಧಗಳು) – ಜಿ. ಎಚ್. ನಾಯಕ
59. 2015-ಅಕ್ಷಯ ಕಾವ್ಯ (ಕವನ ಸಂಕಲನ) – ಕೆ. ವಿ. ತಿರುಮಲೇಶ್
60. 2016-ಸ್ವಾತಂತ್ರ್ಯದ ಓಟ (ಕಾದಂಬರಿ) – ಬೊಳುವಾರು ಮಹಮದ್ ಕುಂಞ್
61. 2017-ಕಥನ ಭಾರತಿ (ವಿಮರ್ಶೆ) – ಟಿ.ಪಿ.ಅಶೋಕ
62. 2018-ಅನುಶ್ರೇಣಿ ಯಜಮಾನಿಕೆ (ವಿಮರ್ಶೆ)- ಕೆ. ಜಿ. ನಾಗರಾಜಪ್ಪ
63. 2019-ಕುದಿ ಎಸರು (ಆತ್ಮಕಥೆ)- ವಿಜಯಮ್ಮ 

Thanks for Reading and Keep Visiting our website for more updates.

Tags : General Knowledge

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ

 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ


ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್.

ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ.

1982 ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ. 1982ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ. ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.

# ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ

1965 : ಜಿ. ಶಂಕರ ಕುರುಪ್ – ಮಲಯಾಳಂ – ಓಡಕ್ತುಳಲ್
1966 : ತಾರಾಶಂಕರ ಬಂದೋಪಾಧ್ಯಾಯ – ಬೆಂಗಾಲಿ – ಗಣದೇವತಾ
1967 : ಉಮಾಶಂಕರ್ ಜೋಶಿ – ಗುಜರಾತಿ – ನಿಶಿತಾ
1967 : ಕುವೆಂಪು – ಕನ್ನಡ – ಶ್ರೀ ರಾಮಾಯಣ ದರ್ಶನಂ
1968 : ಸುಮಿತ್ರಾನಂದನ ಪಂತ್ – ಹಿಂದಿ – ಚಿದಂಬರಾ
1969 : ಫಿರಾಕ್ ಗೋರಕ್ ಪುರಿ – ಉರ್ದು – ಗುಲ್-ಎ-ನಗ್ಮಾ
1970 : ವಿಶ್ವನಾಥ ಸತ್ಯನಾರಾಯಣ – ತೆಲುಗು – ರಾಮಾಯಣ ಕಲ್ಪವೃಕ್ಷಮು
1971 : ಬಿಷ್ಣು ಡೆ – ಬೆಂಗಾಲಿ – ಸ್ಮೃತಿ ಸತ್ತಾ ಭವಿಷ್ಯತ್
1972 : ರಾಮ್‌ಧಾರಿ ಸಿಂಗ್ ದಿನಕರ್ – ಹಿಂದಿ – ಊರ್ವಶಿ
1973 : ದ. ರಾ. ಬೇಂದ್ರೆ – ಕನ್ನಡ – ನಾಕುತಂತಿ

1973 : ಗೋಪಿನಾಥ ಮೊಹಾಂತಿ – ಒಡಿಯಾ – ಮತಿಮತಾಲ್
1974 : ವಿ. ಎಸ್. ಖಾಂಡೇಕರ್ – ಮರಾಠಿ – ಯಯಾತಿ
1975 : ಪಿ. ವಿ. ಅಖಿಲನ್ – ತಮಿಳು – ಚಿತ್ರಪ್ಪಾವೈ
1976 : ಆಶಾಪೂರ್ಣ ದೇವಿ – ಬೆಂಗಾಲಿ – ಪ್ರಥಮ್ ಪ್ರತಿಶೃತಿ
1977 : ಕೆ. ಶಿವರಾಮ ಕಾರಂತ – ಕನ್ನಡ – ಮೂಕಜ್ಜಿಯ ಕನಸುಗಳು
1978 : ಸಚ್ಚಿದಾನಂದ ವಾತ್ಸಾಯನ – ಹಿಂದಿ – ಕಿತ್ನೀ ನಾವೋಂ ಮೇಂ ಕಿತ್ನೀ ಬಾರ್
1979 : ಬೀರೇಂದ್ರ ಕುಮಾರ್ ಭಟ್ಟಾಚಾರ್ಯ – ಅಸ್ಸಾಮಿ – ಮೃತ್ಯುಂಜಯ್
1980 : ಎಸ್. ಕೆ. ಪೊಟ್ಟೆಕ್ಕಾಟ್ – ಮಲಯಾಳಂ – ಒರು ದೇಸದಿಂಟೆ ಕಥಾ
1981 : ಅಮೃತಾ ಪ್ರೀತಮ್ – ಪಂಜಾಬಿ – ಕಾಗಜ್ ತೆ ಕ್ಯಾನ್ವಾಸ್
1982 : ಮಹಾದೇವಿ ವರ್ಮಾ – ಹಿಂದಿ – ಸಮಗ್ರ ಸಾಹಿತ್ಯ

1983 : ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಕನ್ನಡ ಚಿಕ್ಕವೀರ ರಾಜೇಂದ್ರ
1984 : ತಕಳಿ ಶಿವಶಂಕರ ಪಿಳ್ಳೈ – ಮಲಯಾಳಂ – ಸಮಗ್ರ ಸಾಹಿತ್ಯ
1985 : ಪನ್ನಾಲಾಲ್ ಪಟೇಲ್ – ಗುಜರಾತಿ – ಸಮಗ್ರ ಸಾಹಿತ್ಯ
1986 : ಸಚ್ಚಿದಾನಂದ ರಾವುತರಾಯ್ – ಒಡಿಯಾ – ಸಮಗ್ರ ಸಾಹಿತ್ಯ
1987 : ವಿ. ವಿ. ಶಿರ್ವಾಡ್ಕರ್ – ಮರಾಠಿ – ಸಮಗ್ರ ಸಾಹಿತ್ಯ
1988 : ಸಿ. ನಾರಾಯಣ ರೆಡ್ಡಿ – ತೆಲುಗು – ಸಮಗ್ರ ಸಾಹಿತ್ಯ
1989 : ಕುರ್ರಾತುಲೈನ್ ಹೈದರ್ – ಉರ್ದು – ಸಮಗ್ರ ಸಾಹಿತ್ಯ
1990 : ವಿ. ಕೃ. ಗೋಕಾಕ – ಕನ್ನಡ – ಸಮಗ್ರ ಸಾಹಿತ್ಯ
1991 : ಸುಭಾಷ್ ಮುಖ್ಯೋಪಾಧ್ಯಾಯ – ಬೆಂಗಾಲಿ – ಸಮಗ್ರ ಸಾಹಿತ್ಯ
1992 : ನರೇಶ್ ಮೆಹ್ತಾ  ಹಿಂದಿ – ಸಮಗ್ರ ಸಾಹಿತ್ಯ

1993 : ಸೀತಾಕಾಂತ್ ಮಹಾಪಾತ್ರ  ಒಡಿಯಾ  ಸಮಗ್ರ ಸಾಹಿತ್ಯ
1994 : ಯು. ಆರ್. ಅನಂತಮೂರ್ತಿ – ಕನ್ನಡ – ಸಮಗ್ರ ಸಾಹಿತ್ಯ
1995 : ಎಂ. ಟಿ. ವಾಸುದೇವನ್ ನಾಯರ್  ಮಲಯಾಳಂ  ಸಮಗ್ರ ಸಾಹಿತ್ಯ
1996 : ಮಹಾಶ್ವೇತಾ ದೇವಿ  ಬೆಂಗಾಲಿ – ಸಮಗ್ರ ಸಾಹಿತ್ಯ
1997 : ಅಲಿ ಸರ್ದಾರ್ ಜಾಫ್ರಿ  ಉರ್ದು – ಸಮಗ್ರ ಸಾಹಿತ್ಯ
1998 : ಗಿರೀಶ್ ಕಾರ್ನಾಡ್ – ಕನ್ನಡ – ಸಮಗ್ರ ಸಾಹಿತ್ಯ
1999 : ನಿರ್ಮಲ್ ವರ್ಮ – ಹಿಂದಿ – ಸಮಗ್ರ ಸಾಹಿತ್ಯ
1999 : ಗುರುದಯಾಳ್ ಸಿಂಗ್  ಪಂಜಾಬಿ  ಸಮಗ್ರ ಸಾಹಿತ್ಯ
2000 : ಇಂದಿರಾ ಗೋಸ್ವಾಮಿ  ಅಸ್ಸಾಮಿ – ಸಮಗ್ರ ಸಾಹಿತ್ಯ
2001 : ರಾಜೇಂದ್ರ ಕೆ. ಶಾ  ಗುಜರಾತಿ  ಸಮಗ್ರ ಸಾಹಿತ್ಯ

2002 : ಡಿ. ಜಯಕಾಂತನ್  ತಮಿಳು  ಸಮಗ್ರ ಸಾಹಿತ್ಯ
2003 : ವಿಂದಾ ಕರಂದೀಕರ್  ಮರಾಠಿ – ಸಮಗ್ರ ಸಾಹಿತ್ಯ
2004 : ರೆಹಮಾನ್ ರಾಹಿ  ಕಾಶ್ಮೀರಿ – ಸಮಗ್ರ ಸಾಹಿತ್ಯ
2005 : ರವೀಂದ್ರ ಕೇಳೇಕರ್  ಕೊಂಕಣಿ – ಸಮಗ್ರ ಸಾಹಿತ್ಯ
2006 : ಸತ್ಯವ್ರತ ಶಾಸ್ತ್ರಿ  ಸಂಸ್ಕೃತ  ಸಮಗ್ರ ಸಾಹಿತ್ಯ
2007 : ಒ. ಎನ್. ವಿ. ಕುರುಪ್  ಮಲಯಾಳಂ  ಸಮಗ್ರ ಸಾಹಿತ್ಯ
2008 : ಅಖ್ಲಾಕ್ ಮೊಹಮ್ಮದ್ ಖಾನ್ ಶಹರ್ಯಾರ್  ಉರ್ದು  ಸಮಗ್ರ ಸಾಹಿತ್ಯ
2009 : ಅಮರ್ ಕಾಂತ್  ಹಿಂದಿ – ಸಮಗ್ರ ಸಾಹಿತ್ಯ
2009 : ಶ್ರೀ ಲಾಲ್ ಶುಕ್ಲ  ಹಿಂದಿ  ಸಮಗ್ರ ಸಾಹಿತ್ಯ
2010 : ಚಂದ್ರಶೇಖರ ಕಂಬಾರ – ಕನ್ನಡ – ಸಮಗ್ರ ಸಾಹಿತ್ಯ

2011 : ಪ್ರತಿಭಾ ರೇ  ಒಡಿಯಾ – ಸಮಗ್ರ ಸಾಹಿತ್ಯ
2012 : ರಾವೂರಿ ಭರದ್ವಾಜ  ತೆಲುಗು  ಸಮಗ್ರ ಸಾಹಿತ್ಯ
2013 : ಕೇದಾರನಾಥ್ ಸಿಂಗ್  ಹಿಂದಿ – ಸಮಗ್ರ ಸಾಹಿತ್ಯ
2014 : ಭಾಲಚಂದ್ರ ನೇಮಾಡೆ  ಮರಾಠಿ  ಸಮಗ್ರ ಸಾಹಿತ್ಯ
2015 : ರಘುವೀರ್ ಚೌಧರಿ  ಗುಜರಾತಿ  ಸಮಗ್ರ ಸಾಹಿತ್ಯ
2016 : ಶಂಖ ಘೋಷ್  ಬೆಂಗಾಲಿ  ಸಮಗ್ರ ಸಾಹಿತ್ಯ
2017 : ಕೃಷ್ಣಾ ಸೋಬ್ತಿ  ಹಿಂದಿ  ಸಮಗ್ರ ಸಾಹಿತ್ಯ
2018 : ಅಮಿತಾವ್ ಘೋಷ್  ಇಂಗ್ಲಿಷ್  ಸಮಗ್ರ ಸಾಹಿತ್ಯ
2019 : ಅಕ್ಕಿತಂ ಅಚ್ಯುತನ್ ನಂಬೂದಿರಿ – ಮಲಯಾಳಂ  ಸಮಗ್ರ ಸಾಹಿತ್ಯ

➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರ ಬಗ್ಗೆ :
# ಕುವೆಂಪು:
ಕನ್ನಡಕ್ಕೆ ಮೊಟ್ಟಮೊದಲು ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಕೆ.ವಿ. ಪುಟ್ಟಪ್ಪನವರು. ಇವರು ‘ಕುವೆಂಪು’ ಎಂಬ ಕಾವ್ಯನಾಮದಿಂದ ಪ್ರಸಿದ್ಧರು. ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಇವರ “ಶ್ರೀ ರಾಮಾಯಣ ದರ್ಶನಂ” ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ 1968 ರಲ್ಲಿ ‘ಜ್ಞಾನಪೀಠ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು. ಕುವೆಂಪುರವರು ಜಲಗಾರ, ಸ್ಮಶಾನಕುರುಕ್ಷೇತ್ರ, ಶೂದ್ರತಪಸ್ವಿ, ಬೆರಳ್‍ಗೆ ಕೊರಳ್, ಅವರು ರಚಿಸಿದ ಜನಪ್ರಿಯ ನಾಟಕಗಳು. ಪಾಂಚಜನ್ಯ, ಪಕ್ಷಿಕಾಶಿ, ನವಿಲು, ಮುಂತಾದುವುಗಳು ಅವರ ಕವನ ಸಂಕಲನಗಳು. ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಗಳನ್ನೂ ಸಹ ರಚಿಸಿದ್ದಾರೆ. ‘ನೆನಪಿನ ದೋಣಿ’ ಇವರ ಆತ್ಮಕಥೆ.

# ದ.ರಾ. ಬೇಂದ್ರೆ:
ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ(ದ.ರಾ. ಬೇಂದ್ರೆ)ಯವರು ಧಾರವಾಡದಲ್ಲಿ 1886ರ ಜನವರಿ 31ರಂದು ಜನಿಸಿದರು. “ನಾಕುತಂತಿ” ವರಕವಿ ದ.ರಾ.ಬೇಂದ್ರೆಯವರ ಕವನ ಸಂಕಲನ. ಇದಕ್ಕಾಗಿ ಬೇಂದ್ರೆಯವರಿಗೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರಕಿತು. ಅಂಬಿಕಾತನಯ ದತ್ತರ ಪ್ರಮುಖ ಕೃತಿಗಳೆಂದರೆ ಕೃಷ್ಣಕುಮಾರಿ, ಗರಿ, ನಾಕುತಂತಿ, ಸಖಿಗೀತ, ನಾದಲೀಲೆ, ಉಯ್ಯಾಲೆ, ಅರಳುಮರಳು,ನಾಕುತಂತಿ, ಬಾ ಹತ್ತರ, ಸೂರ್ಯಪಾನ, ಮೂರ್ತಿ ಮತ್ತು ಕಾಮಕಸ್ತೂರಿ, ಹೃದಯ ಸಮುದ್ರ, ಮುಕ್ತ ಕಂಠ, ಸಂಚಯ, ಉತ್ತರಾಯಣ ಮುಂತಾದ ಕವನ ಸಂಗ್ರಹಗಳು. ಬಾಲಬೋಧೆ, ಪರಾಕಿ, ಕಾವ್ಯ ವೈಖರಿ ಮುಂತಾದ 20ಕ್ಕೂ ಅಧಿಕ ಗದ್ಯ ಬರಹ ಸಂಗ್ರಹಗಳು. ಸಾಹಿತ್ಯವಿಮರ್ಶೆ, ಸಾಹಿತ್ಯ ಸಂಶೋಧನೆ, ವಿಚಾರ ಮಂಜರಿ, ಮುಂತಾದ ಹಲವು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ.

# ಶಿವರಾಮ ಕಾರಂತ:
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸಮೀಪದ ಕೋಟದಲ್ಲಿ 1902 ಅಕ್ಟೋಬರ್ 10 ರಂದು ಜನಿಸಿದ್ದ ಶಿವರಾಮ ಕಾರಂತರು, ಪ್ರೌಢಶಿಕ್ಷಣವನ್ನಷ್ಟೇ ಪಡೆದಿದ್ದರು. ಇವರ ‘ಮೂಕಜ್ಜಿ ಕನಸುಗಳು’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರು ಶ್ರೇಷ್ಠ ಕಾದಂಬರಿಕಾರ, ಕಲಾವಿದ, ಅಲೆಮಾರಿ, ಪತ್ರಕರ್ತ, ಪರಿಸರವಾದಿ, ಸಿನಿಮಾ ನಿರ್ಮಾಪಕರಾಗಿ, ನೃತ್ಯಪಟುವಾಗಿ, ಛಾಯಾಗ್ರಾಹಕರಾಗಿ ಹೀಗೆ ಸಾಹಿತ್ಯ-ಸಂಸ್ಕೃತಿಯ ಹತ್ತು ಹಲವು ಪ್ರಕಾರಗಳಲ್ಲಿ ಕೈಯಾಡಿಸಿ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿಗಳಿಸಿದ್ದರು.

# ಮಾಸ್ತಿ ವೆಂಕಟೇಶ ಅಯ್ಯಂಗಾರ:
ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರಲ್ಲೊಬ್ಬರಾದ ‘ಸಣ್ಣಕಥೆಗಳ ಜನಕ’ ಎಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು ‘ಶ್ರೀನಿವಾಸ’ ಎಂಬ ಕಾವ್ಯನಾಮದಿಂದ ಸುಪ್ರಸಿದ್ಧರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಂತೂ ‘ಮಾಸ್ತಿ ಕನ್ನಡದ ಆಸ್ತಿ’ ಎಂಬ ನುಡಿಗಟ್ಟಿಗೆ ಪಾತ್ರರಾಗಿದ್ದರು. ಇವರಿಗೆ ಮೈಸೂರು ಅರಸರು ‘ರಾಜಸೇವಾಸಕ್ತ’ ಎಂಬ ಬಿರುದನ್ನು ನೀಡಿದರು. ಮಾಸ್ತಿಯವರ ಪ್ರಮುಖ ಕೃತಿಗಳಲ್ಲೊಂದು ‘ಚಿಕ್ಕ ವೀರ ರಾಜೇಂದ್ರ’ ಕಾದಂಬರಿ. ಇನ್ನೊಂದು ‘ಚೆನ್ನಬಸವ ನಾಯಕ’, ರಾಜವಂಶಗಳ ಉನ್ನತಿ ಅವನತಿಗಳು ಇವುಗಳ ಕಾಥಾವಸ್ತು. ಮಾಸ್ತಿಯವರ ಇತರ ಕೃತಿಗಳೆಂದರೆ ಶೇಷಮ್ಮ,ಸುಬ್ಬಣ್ಣ ಮುಂತಾದ ದೊಡ್ಡ ಕಥೆಗಳು. ಗೌಡರ ಮಲ್ಲಿ, ರಾಮನವಮಿ,ಮೂಕನ ಮಕ್ಕಳು, ಸುನೀತಾ,ಬಿನ್ನಹ, ತಾವರೆ ಮಲಾರ,ಚೆಲುವು,ಸಂಕ್ರಾಂತಿ, ಮಾನವ ಇತ್ಯಾದಿ ಕಾವ್ಯಪ್ರಕಾರದ ಕೃತಿಗಳು.

# ಡಾ.ವಿ.ಕೃ.ಗೋಕಾಕ್‌:
ಕನ್ನಡ ಸಾಹಿತ್ಯಲೋಕದ ದಿಗ್ಗಜರಲ್ಲಿ ಡಾ.ವಿ.ಕೃ.ಗೋಕಾಕ್‌ ಒಬ್ಬರು. ಇವರು ಸಾಹಿತ್ಯ ಕ್ಷೇತ್ರದಲ್ಲಿಯಂತೆಯೇ ಭಾಷಾ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದವರು. ವಿನಾಯಕ ಕೃಷ್ಣ ಗೋಕಾಕ್‌ ಅವರು ವಿ.ಕೃ.ಗೋಕಾಕ್‌ ಎಂದೇ ಸುಪರಿಚಿತರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಡಾ.ವಿ.ಕೃ.ಗೋಕಾಕರಿಗೆ ಭಾರತದ ಶ್ರೇಷ್ಠತಮ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ (1990) ಲಭಿಸಲು ಕಾರಣವಾದ ಕೃತಿ ‘ಭಾರತ ಸಿಂಧು ರಶ್ಮಿ’ ಎಂಬ ಮಹಾಕಾವ್ಯ. ಈ ಮಹಾಕಾವ್ಯವು ಎರಡು ಸಂಪುಟಗಳಲ್ಲಿದ್ದು, 12 ಖಂಡಗಳನ್ನು ಹೊಂದಿದೆ.

# ಡಾ. ಯು.ಆರ್. ಅನಂತಮೂರ್ತಿ:
ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಡಾ. ಯು.ಆರ್. ಅನಂತಮೂರ್ತಿಯವರು. ಅನಂತಮೂರ್ತಿಯವರು ಸಣ್ಣಕತೆಗಾರರಾಗಿ ಹಾಗೂ ಕಾದಂಬರಿಕಾರರಾಗಿ ಪ್ರಸಿದ್ಧರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. 1955ರಲ್ಲಿ ‘ಎಂದೆಂದೂ ಮುಗಿಯದ ಕತೆ’ ಎಂಬ ಕಥಾಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಐದು ದಶಕಗಳ ಕಥೆಗಳು(ಸಮಗ್ರ) ಇವು ಇವರ ಕಥಾಸಂಕಲನಗಳು. ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ, ದಿವ್ಯ, ಇವರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಪೂಜೆ ಯಾಕೆ ಕೂಡದು, ಇವುಗಳು ವಿಮರ್ಶೆಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ ಇವರ ಕವನಸಂಕಲನಗಳು.

# ಗಿರೀಶ್ ಕಾರ್ನಾಡ:
ಗಿರೀಶ್ ಕಾರ್ನಾಡರು 1938ರ ಮೇ 19ರಂದು ಮಹಾರಾಷ್ಟ್ರದ ಮಾಥೆರ್ನ ಎಂಬಲ್ಲಿ ಜನಿಸಿದರು. ಗಿರೀಶರ ಮೊದಲನೆ ಕೃತಿ ‘ಯಾಯಾತಿ’ ಎಂಬ ನಾಟಕ. ಈ ನಾಟಕವು ಇವರಿಗೆ ದೊಡ್ಡಮಟ್ಟದಲ್ಲಿ ಪ್ರಶಂಸೆ ಮತ್ತು ಪ್ರಚಾರವನ್ನು ತಂದುಕೊಟ್ಟಿತು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಹಿಟ್ಟಿನಹುಂಜ ಮತ್ತು ಅಗ್ನಿ ಹಾಗೂ ಮಳೆ ಇವು ಪೌರಣಿಕ ನಾಟಕಗಳಾದರೆ, ತುಘಲಕ್, ತಲೆದಂಡ ಹಾಗೂ ಟೀಪುಸುಲ್ತಾನ್ ನಾಟಕಗಳು ಐತಿಹಾಸಿಕ ಹಿನ್ನಲೆಯುಳ್ಳವು. ಜಾನಪದ ವಸ್ತುಗಳನ್ನು ಒಳಗೊಂಡ ನಾಟಕಗಳು ಹಯವದನ, ನಾಗಮಂಡಲ. ಸಾಮಾಜಿಕ ನಾಟಕ ಅಂಜುಮಲ್ಲಿಗೆ, ಗಿರೀಶ್ ಕಾರ್ನಾಡರ್ ನಾಟಕಗಳು ಇಂಗ್ಲಿಷ್, ಹಿಂದಿ, ಮರಾಠಿ ಹಾಗೂ ಭಾರತೀಯ ಭಾಷೆಗಳಲ್ಲಿ ಪ್ರದರ್ಶನಗೊಂಡಿವೆ. ನಾಟಕಗಳ ರಚನೆಯ ಜೊತೆಗೆ ಇವರು ರಂಗಭೂಮಿಯಲ್ಲಿ ಹಾಗೂ ಚಲನಚಿತ್ರ ರಂಗಗಳಲ್ಲಿ ಅಭಿನಯ ಮತ್ತು ನಿರ್ದೇಶಕರಾಗಿ ಜನಪ್ರಿಯರಾಗಿದ್ದಾರೆ.

# ಡಾ. ಚಂದ್ರಶೇಖರ ಕಂಬಾರ:
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೇರಿಯಲ್ಲಿ 2 ಜನವರಿ 1937ರಂದು ಡಾ. ಚಂದ್ರಶೇಖರ ಕಂಬಾರರು ಜನಿಸಿದರು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಕಂಬಾರರು ರಚಿಸಿರುವ ಪ್ರಮುಖ ಕೃತಿಗಳೆಂದರೆ, ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಬೆಳ್ಳಿಮೀನು, ಅಕ್ಕುಕ್ಕು ಹಾಡುಗಳೆ, ಚಕೋರಿ ಇವು ಕಾವ್ಯಗಳು. ನಾಟಕಗಳು – ಬೆಂಬತ್ತಿದ ಕಣ್ಣು, ನಾರ್ಸಿಸಸ್, ಜೋಕುಮಾರ ಸ್ವಾಮಿ, ಚಾಳೇಶ, ಕಿಟ್ಟಿಯ ಕತೆ, ಜೈ ಸಿದ ನಾಯಕ, ಕಾಡು ಕುದುರೆ, ನಾಯೀ ಕತೆ ಮುಂತಾದುವು. ಕಾದಂಬರಿ – ಅಣ್ಣ ತಂಗಿ, ಕರಿಮಾಯಿ, ಜೀಕೆ ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರೆವ್ವಾ ಮತ್ತು ಅರಮನೆ. ಜಾನಪದ- ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಸಂಗ್ಯಾಬಾಳ್ಯಾ, ಬಣ್ಣಿಸಿ ಹಾಡವ್ವ ನನ ಬಳಗ, ಬಯಲಾಟಗಳು, ಮಾತಡೋ ಲಿಂಗವೇ ಮುಂತಾದವುಗಳು. ಇತರೆ- ಕನ್ನಡ ನಾಟಕ ಸಂಪುಟ, ನೆಲದ ಮರೆಯ ನಿದಾನ.  

Thanks for Reading and Keep Visiting our website for more updates

Tags : General Knowledge
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

 ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ 


ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುನ್ನತ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ.

ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. 1966ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ).

ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ.

ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (1990 ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (1987 ರಲ್ಲಿ).

ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ “ಭಾರತ ರತ್ನ”, ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು “ಸತ್ಯಮೇವ ಜಯತೇ” ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.

➤ ಪ್ರಶಸ್ತಿಗೆ ಭಾಜನರಾದ ವರ್ಷ – ಪುರಸ್ಕೃತರ ಹೆಸರು ಮತ್ತು ಅವರ ರಾಜ್ಯ/ ದೇಶ
1) 1954- ಎಸ್ ರಾಧಾಕೃಷ್ಣನ್ -ಆಂಧ್ರಪ್ರದೇಶ
2) 1954- ಸಿ.ರಾಜಗೋಪಾಲಚಾರಿ – ತಮಿಳುನಾಡು
3) 1954- ಡಾ.ಸಿ.ವ್ಹಿ.ರಾಮನ್ – ತಮಿಳುನಾಡು

4) 1955- ಭಗವಾನದಾಸ – ಉತ್ತರ ಪ್ರದೇಶ
5) 1955- ಸರ್.ಎಮ್.ವಿಶ್ವೇಶ್ವರಯ್ಯ – ಕರ್ನಾಟಕ
6) 1955- ಜವಾಹರಲಾಲ್ ನೆಹರು – ಉತ್ತರ ಪ್ರದೇಶ

7) 1957- ಪಂ.ಗೋ.ವಲ್ಲಭಿ ಪಂಥ – ಉತ್ತರ ಪ್ರದೇಶ
8) 1958- ಧೊಂಡೊ ಕೇಶವ ಕರ್ವೆ – ಮಹಾರಾಷ್ಟ್ರ

9) 1961- ಬಿಧಾನ್‌ ಚಂದ್ರ ರಾಯ್‌ – ಪಶ್ಚಿಮ ಬಂಗಾಳ
10) 1961- ಪುರುಷೋತ್ತಮದಾಸ ಟಂಡನ್ – ಉತ್ತರ ಪ್ರದೇಶ

11) 1962- ಡಾ.ರಾಜೇಂದ್ರ ಪ್ರಸಾದ್ – ಬಿಹಾರ

12) 1963- ಜಾಕೀರ್ ಹುಸೇನ್ – ಉತ್ತರ ಪ್ರದೇಶ
13) 1963- ಡಾ.ಪಾಂಡುರಂಗ ವಾಮನ ಕಾಣೆ – ಮಹಾರಾಷ್ಟ್ರ

14) 1966- ಲಾಲ್ ಬಹಾದ್ದೂರ ಶಾಸ್ತ್ರೀ – ಉತ್ತರ ಪ್ರದೇಶ
15) 1971- ಇಂದಿರಾಗಾಂಧಿ – ಉತ್ತರ ಪ್ರದೇಶ
16) 1975- ವ್ಹಿ.ವ್ಹಿ.ಗಿರಿ – ಒಡಿಶಾ
17) 1976- ಕೆ.ಕಾಮರಾಜ್ – ತಮಿಳುನಾಡು
18) 1980- ಮಧರ್ ಥೆರಿಸಾ -ಪಶ್ಚಿಮ ಬಂಗಾಳ (ಉತ್ತರ ಮ್ಯಾಸಿಡೋನಿಯಾ)
19) 1983- ವಿನೋಬಾ ಭಾವೆ – ಮಹಾರಾಷ್ಟ್ರ
20) 1987- ಖಾನ್ ಅಬ್ದಲ್ ಗಫಾರಖಾನ್ – ಪಾಕಿಸ್ತಾನ
21) 1988- ಎಂ.ಜಿ.ರಾಮಚಂದ್ರನ್ – ತಮಿಳುನಾಡು

22) 1990- ಡಾ.ಅಂಬೇಡ್ಕರ್ – ಮಹಾರಾಷ್ಟ್ರ
23) 1990- ನೆಲ್ಸನ್ ಮಂಡೇಲಾ – ದಕ್ಷಿಣ ಆಫ್ರಿಕಾ

24) 1991- ಮೊರಾರ್ಜಿ ದೇಸಾಯಿಯ – ಗುಜರಾತ್
25) 1991- ರಾಜೀವ್ ಗಾಂಧೀ – ಉತ್ತರ ಪ್ರದೇಶ
26) 1991- ಸರ್ದಾರ್ ಪಟೇಲ್ – ಗುಜರಾತ್

27) 1992- ಜೆ.ಆರ್.ಡಿ.ಟಾಟಾ – ಮಹಾರಾಷ್ಟ್ರ
28) 1992- ಮೌಲಾನಾ ಅಬ್ದುಲ್ ಕಲಾಂ ಆಜಾದ್ – ಪಶ್ಚಿಮ ಬಂಗಾಳ
29) 1992- ಸತ್ಯಜಿತ್ ರೇ – ಪಶ್ಚಿಮ ಬಂಗಾಳ

30) 1997- ಗುಲ್ಜಾರಿಲಾಲ್ ನಂದಾ – ಪಂಜಾಬ್
31) 1997- ಅರುಣಾ ಅಸಫ್ ಅಲಿ – ಪಶ್ಚಿಮ ಬಂಗಾಳ
32) 1997- ಎ.ಪಿ.ಜೆ.ಅಬ್ದುಲ್ ಕಲಾಂ – ತಮಿಳುನಾಡು

33) 1998- ಎಂ.ಎಸ್.ಸುಬ್ಬುಲಕ್ಷ್ಮಿ – ತಮಿಳುನಾಡು
34) 1998- ಸಿ. ಸುಬ್ರಹ್ಮಣ್ಯಂ – ತಮಿಳುನಾಡು

35) 1999- ಜಯಪ್ರಕಾಶ ನಾರಾಯಣ – ಬಿಹಾರ
36) 1999- ಅಮರ್ತ್ಯಸೇನ್ – ಪಶ್ಚಿಮ ಬಂಗಾಳ
37) 1999- ರವಿಶಂಕರ್ – ಶ್ಚಿಮ ಬಂಗಾಳ
38) 1999- ಗೋಪಿನಾಥ್ ಬೋರ್ಡೊಲೋಯಿ – ಅಸ್ಸಾಂ

39) 2001- ಉ.ಬಿಸ್ಮಲ್ಲಾಖಾನ್ -ಉತ್ತರ ಪ್ರದೇಶ
40) 2001- ಲತಾ ಮಂಗೇಶ್ಕರ್ -ಮಹಾರಾಷ್ಟ್ರ

41) 2008- ಭೀಮಸೇನ ಜೋಶಿ – ಕರ್ನಾಟಕ

42) 2013- ಸಚಿನ್ ತೆಂಡೂಲ್ಕರ್ – ಮಹಾರಾಷ್ಟ್ರ
43) 2013- ಸಿ.ಎನ್.ಆರ್.ರಾವ್ – ಕರ್ನಾಟಕ

44) 2015- ಮದನ ಮೋಹನ ಮಾಳ್ವೀಯಾ – ಉತ್ತರ ಪ್ರದೇಶ
45) 2015- ಅಟಲ ಬಿಹಾರಿ ವಾಜಪೇಯಿ – ಮಧ್ಯಪ್ರದೇಶ

46) 2019- ಪ್ರಣಬ್ ಮುಖರ್ಜಿ – ಪಶ್ಚಿಮ ಬಂಗಾಳ
47) 2019 – ಭೂಪೇನ್ ಹಜಾರಿಕಾ – ಅಸ್ಸಾಂ
48) 2019 – ನಾನಾಜಿ ದೇಶಮುಖ್ – ಮಹಾರಾಷ್ಟ್ರ. 

Thanks for Reading and keep Visiting our website for more updates.

Tags : General Knowledge

ಲೋಹಗಳಿಗೆ ಸಂಬಧಿಸಿದ 35 ಸಾಮಾನ್ಯ ಪ್ರಶ್ನೆಗಳು

 ಲೋಹಗಳಿಗೆ ಸಂಬಂಧಿಸಿದ 35 ಸಾಮಾನ್ಯ ಪ್ರಶ್ನೆಗಳು


1. ಎಲೆಕ್ಟ್ರಾನ್‍ಗಳನ್ನು ಬಿಟ್ಟು ಕೊಡುವ ಗುಣವುಳ್ಳ ಧಾತುಗಳು ಯಾವುದು?
• ಲೋಹಗಳು
2. ಚಾಕುವಿನಿಂದ ಕತ್ತರಿಸಿವಷ್ಟು ಮೃದುವಾದ ಲೋಹ ಯಾವುದು?
• ಸೋಡಿಯಂ
3. ಪತ್ರಶೀಲತ್ವ ಮತ್ತು ತಾಂತವತೆ ಇಲ್ಲ ಲೋಹಗಳು ಯಾವುವು?
• ಸತು ಮತ್ತು ಕ್ಷಾರ ಲೋಹಗಳು
4. ರಾಜ ಲೋಹ ಯಾವುದು?
 ಚಿನ್ನ
5. ಭೂಮಿಯಲ್ಲಿ ಶುದ್ಧ ರೂಪದಲ್ಲಿ ದೊರೆಯುವ ಲೋಹಗಳು ಯಾವುವು?
• ಚಿನ್ನ, ಪ್ಲಾಟಿನಂ, ಬೆಳ್ಳಿ
6. ಈ ಲೋಹದ ರಿಬ್ಬನ್ನನ್ನು ಜ್ವಾಲೆಯಲ್ಲಿ ಉರಿಸಿದಾಗ ಪ್ರಕಾಶಮಾನವಾಗಿ ಉರಿಯುತ್ತದೆ. ಈ ಲೋಹ ಯಾವುದು?
• ಮೆಗ್ನಿಷಿಯಂ
7. ಗಾಳಿಯೊಂದಿಗೆ ವರ್ತಿಸಿದೆ ಇರುವ ಲೋಹಗಳು ಸಾರವರ್ಧನೆ

• ಚಿನ್ನ ಮತ್ತು ಪ್ಲಾಟಿನಂ
8. ಭೂಮಿಯಲ್ಲಿ ಯಥೇಚ್ಚವಾಗಿ ದೊರೆಯುವ ಲೋಹ ಯಾವುದು?
• ಅಲ್ಯೂಮಿನಿಯಂ
9. ದುರ್ಬಲ ನೈಟ್ರಿಕ್ ಆಮ್ಲದೊಂದಿಗೆ ವರ್ತಿಸದೇ ಇರುವ ಲೋಹ ಯಾವುದು?
• ಕಬ್ಬಿಣ
10. ಕಬ್ಬಿಣವನ್ನು ಯಾವ ಕುಲುಮೆಯಲ್ಲಿ ಉದ್ಧರಿಸುತ್ತಾರೆ?
• ಊದುಕುಲುಮೆ
11. ಊದು ಕುಲುಮೆಯಲ್ಲಿ ದೊರೆಯುವ ಕಬ್ಬಿಣ ಯಾವುದು?
• ಬೀಡುಕಬ್ಬಿಣ
12. ಕಬ್ಬಿಣದ ಉದ್ಧರಣದಲ್ಲಿ ದೊರೆಯುವ ಕಿಟ್ಟ ಯಾವುದು?
• ಕ್ಯಾಲ್ಸಿಯಂ ಸಿಲಿಕೇಟ್
13. ತಾಮ್ರದ ಉದ್ಧರಣದಲ್ಲಿ ದೊರೆಯುವ ಕಿಟ್ಟ ಯಾವುದು?
• ಫೆರಸ್ ಸಿಲಿಕೇಟ್
14. ತಾಮ್ರದ ಉದ್ಧರಣದಲ್ಲಿ ಅದುರಿಗೆ ಯಾವುದನ್ನು ಸೇರಿಸಿ ಕಿಟ್ಟವನ್ನು ಹೊರತೆಗೆಯುವರು?
• ಮರಳು
15. ಅಲ್ಯೂಮಿನಿಯಂ ಅದಿರಿನ (ಬಾಕ್ಸೈಟ್) ಸಾರವರ್ಧನೆಯಲ್ಲಿ ಬೆರೆಸುವ ದ್ರಾವಣ ಯಾವುದು?
• ಸೋಡಿಯಂ ಹೈಡ್ರಾಕ್ಸೈಡ್
16. ಸೀಮೆಎಣ್ಣೆಯಲ್ಲಿ ಸಂಗ್ರಹಿಸುವ ಲೋಹ ಯಾವುದು?
• ಸೋಡಿಯಂ
17. ತಣ್ಣಿರಿನಲ್ಲಿ ಸಂಗ್ರಹಿಸುವ ಲೋಹ ಯಾವುದು?
• ಬಿಳಿರಂಜಕ
18. ಲೋಹಗಳು ನೀರಿನೊಂದಿಗೆ ಪ್ರತಿಕ್ರಿಯಿಸಿದಾಗ ಬಿಡುಗಡೆಯಾಗುವ ಅನಿಲ ಯಾವುದು?
• ಹೈಡ್ರೋಜನ್
19. ತಾಮ್ರವನ್ನು ಶುದ್ಧೀಕರಿಸುವ ವಿಧಾನ ಯಾವುದು?
• ವಿದ್ಯುದ್ವಿಶ್ಲೇಷಣೆ
20. ತಾಮ್ರದ ಶುದ್ಧೀಕರಣದಲ್ಲಿ ಬಳಸುವ ವಿದ್ಯದ್ವಿಭಾಜ್ಯ ಯಾವುದು?
• ತಾಮ್ರದ ಸಲ್ಫೇಟ್
21. ಅತ್ಯುತ್ತಮವಾದ ಉಷ್ಣ ಮತ್ತು ವಿದ್ಯುತ್ ವಾಹಕ ಲೋಹ ಯಾವುದು?
• ಬೆಳ್ಳಿ ಮತ್ತು ತಾಮ್ರ
22. ಅಶುದ್ಧವಾದ ತಾಮ್ರ ಯಾವುದು?
• ಬೊಬ್ಬೆ ತಾಮ್ರ
23. ಸಲ್ಫೈಟ್ ಅದಿರುಗಳನ್ನು ಸಾರವರ್ಧಿಸುವ ವಿಧಾನ ಯಾವುದು?
• ಬುರುಗುಪ್ಲವನ
24. ದ್ರವ ಲೋಹಗಳು ಯಾವುವು?
• ಪಾದರಸ ಮತ್ತು ಗ್ಯಾಲಿಯಂ
25. ಮಾನವನು ಅತ್ಯಧಿಕವಾಗಿ ಬಲಸುತ್ತಿರುವ ಲೋಹ ಯಾವುದು?
• ಕಬ್ಬಿಣ
26. ಲೋಹಗಳನ್ನು ತಂತಿಗಳನ್ನಾಗಿ ಮಾಡುವ ಗುನ ಯಾವುದು?
• ತನ್ಯ(ತಾಂತವತೆ)
27. ಲೋಹಗಳನ್ನು ತಗಡುಗಳನ್ನಾಗಿ ಮಾಡುವ ಗುಣ ಯಾವುದು?
• ಕುಟ್ಯ(ಪತ್ರಶೀಲತ್ವ)
28. ಅತ್ಯಂತ ಹಗುರ ಲೋಹ ಯಾವುದು?
• ಲಿಥಿಯಂ
29. ಯಾವ ಲೋಹವನ್ನು ಕ್ಲೋರಿನ್ ತುಂಬಿರುವ ಜಾಡಿಯಲ್ಲಿ ಹಾಕಿದಾಗ ಕಿಡಿಗಳು ಕಂಡುಬರುತ್ತವೆ?
• ಅಲ್ಯೂಮಿನಿಯಂ
30. ನೈಸರ್ಗಿಕವಾಗಿ ದೊರೆಯುವ ಲೋಹಿಯ ಮಿಶ್ರಣಗಳಿಗೆ ಎನೆನ್ನುತ್ತಾರೆ?
• ಖನಿಜಗಳು
31. ಯಾವ ಯಾವ ಖನಿಜಗಳಿಂದ ಆಯಾ ಲೋಹಗಳನ್ನು ಉದ್ಧರಿಸಬಹುದೋ ಆ ಖನಿಜಗಳನ್ನು ಎನೆನ್ನುತ್ತಾರೆ?
• ಅದಿರು
32. ಲೋಹಗಳನ್ನು ಅವುಗಳ ಅದಿರಿನಿಂದ ಉದ್ಧರಿಸಿ ಅವುಗಳನ್ನು ಶುದ್ಧೀಕರಿಸುವ ತಂತ್ರಜ್ಞಾನ ಯಾವುದು?
• ಲೋಹೋದ್ಧರಣ
33. ಲೋಹೋದ್ಧರಣದ ಮೊದಲ ಹಂತ ಯಾವುದು?
• ಅದುರಿನ ಸಾರವರ್ಧನೆ
34. ಅದುರಿನ ಜೊತೆ ಇರುವ ಮಣ್ಣು, ಕಲ್ಲು ಮುಂತಾದ ಭೌಮಿಕ ಪದಾರ್ಥಗಳಿಗೆ ಹೀಗೆನ್ನುವರು?
• ಮಡ್ಡಿ
35. ಅದುರಿನ ಜೊತೆ ಇರುವ ಭೌಮಿಕ ಪದಾರ್ಥಗಳನ್ನು ಬೇರ್ಪಡಿಸಿ ಅದುರಿನಲ್ಲಿ ಲೋಹದ ಪ್ರಮಾಣವನ್ನು ಹೆಚ್ಚಿಸುವ ಕ್ರಿಯೆ ಗೆ ಏನೆಂದು ಹೆಸರು?
• ಅದುರಿನ ಸಾರವರ್ಧನೆ 

Thanks for Reading and Keep Visiting our website for more updates.

Tags : General Knowledge

Samividhanda Vidigalu Part – 3

Hello Everyone Welcome to                                                                      Spardhaspoorthi.com

Heading : Samividhnda Vidigalu Part – 3

This is our website where you will get every day current affairs i.e. questions and answers with pdf which are very much helpful for upcoming KAS, IAS, PSI, PC, FDA, SDA, and All Other Kpsc Examinations. So keep visiting our website for daily important updates which will help you in upcoming examinations.

Type of File : Circular

Language : Kannada

Which Department : Education

Central OR State Information: State

Location : Karnataka

Published Date : 2020

Information Term : Short

Purpose of Information : Employee

Information Format : JPJ

Information Size : 672kb

Number of Pages : 02

Scanned Copy : Yes

Information Editable Text : No

Password Protected : No

Image Available : Yes

Download Link Available : Yes

Copy Text : No

Information Print Enable : Yes

File Quality : High

File size Reduced : No

File Password : No

Rate : Free of cost

For Personal Use Only

Save water,Save life’s.!!

PLEASE NOTE: We have collected this content from the Internet, for the Education purpose to help Students. If you found this is Copyrighted content or it belongs to you and wants to Remove this content in the website, Please contact Admin to Remove this content.

DOWNLOAD

Thanks for Download

Tags : Samividhanda Vidigalu Part – 3, Useful for all competitive Exam , PDF

Samividhanda Vidigalu Part – 2

Hello Everyone Welcome to Spardhaspoorthi.com

Heading : Samividhanda Vidigalu Part – 2

This is our website where you will get every day current affairs i.e. questions and answers with pdf which are very much helpful for upcoming KAS, IAS, PSI, PC, FDA, SDA, and All Other Kpsc Examinations. So keep visiting our website for daily important updates which will help you in upcoming examinations.

Type of File : Circular

Language : Kannada

Which Department : Education

Central OR State Information: State

Location : Karnataka

Published Date : 2020

Information Term : Short

Purpose of Information : Employee

Information Format : JPJ

Information Size : 672kb

Number of Pages : 02

Scanned Copy : Yes

Information Editable Text : No

Password Protected : No

Image Available : Yes

Download Link Available : Yes

Copy Text : No

Information Print Enable : Yes

File Quality : High

File size Reduced : No

File Password : No

Rate : Free of cost

For Personal Use Only

Save water,Save life’s.!!

PLEASE NOTE: We have collected this content from the Internet, for the Education purpose to help Students. If you found this is Copyrighted content or it belongs to you and wants to Remove this content in the website, Please contact Admin to Remove this content.

DOWNLOAD

Thanks for Download

Tags : Samividhanda Vidigalu Part – 2 , Useful for all competitive exam , PDF

Samividhanda Vidigalu Part – 1

Hello Everyone Welcome to Spardhaspoorthi.com

Heading : Samividhanda Vidigalu Part – 1

This is our website where you will get every day current affairs i.e. questions and answers with pdf which are very much helpful for upcoming KAS, IAS, PSI, PC, FDA, SDA, and All Other Kpsc Examinations. So keep visiting our website for daily important updates which will help you in upcoming examinations.

Type of File : Circular

Language : Kannada

Which Department : Education

Central OR State Information: State

Location : Karnataka

Published Date : 2020

Information Term : Short

Purpose of Information : Employee

Information Format : JPJ

Information Size : 672kb

Number of Pages : 02

Scanned Copy : Yes

Information Editable Text : No

Password Protected : No

Image Available : Yes

Download Link Available : Yes

Copy Text : No

Information Print Enable : Yes

File Quality : High

File size Reduced : No

File Password : No

Rate : Free of cost

For Personal Use Only

Save water,Save life’s.!!

PLEASE NOTE: We have collected this content from the Internet, for the Education purpose to help Students. If you found this is Copyrighted content or it belongs to you and wants to Remove this content in the website, Please contact Admin to Remove this content.

DOWNLOAD

Thanks for Download

Tags : Samividhanda Vidigalu Part – 1 , Useful for all competitive exam , PDF

Chiguru General Kannada Notes Part – 2

Hello Everyone Welcome to Spardhaspoorthi.com

Heading : Chiguru General Kannada Notes Part – 2

This is our website where you will get every day current affairs i.e. questions and answers with pdf which are very much helpful for upcoming KAS, IAS, PSI, PC, FDA, SDA, and All Other Kpsc Examinations. So keep visiting our website for daily important updates which will help you in upcoming examinations.

Type of File : Circular

Language : Kannada

Which Department : Education

Central OR State Information: State

Location : Karnataka

Published Date : 2020

Information Term : Short

Purpose of Information : Employee

Information Format : JPJ

Information Size : 672kb

Number of Pages : 02

Scanned Copy : Yes

Information Editable Text : No

Password Protected : No

Image Available : Yes

Download Link Available : Yes

Copy Text : No

Information Print Enable : Yes

File Quality : High

File size Reduced : No

File Password : No

Rate : Free of cost

For Personal Use Only

Save water,Save life’s.!!

PLEASE NOTE: We have collected this content from the Internet, for the Education purpose to help Students. If you found this is Copyrighted content or it belongs to you and wants to Remove this content in the website, Please contact Admin to Remove this content.

DOWNLOAD

Thanks for Download

Tags : KPSC , SDA / FDA Notes , Chiguru General Kannada Notes Part – 2, PDF