‘ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ : ರಾಜ್ಯ ಸರ್ಕಾರದಿಂದ Phd,M.phil ‘ಫೆಲೋಶಿಪ್ 1 ಲಕ್ಷಕ್ಕೆ ಏರಿಕೆ
ಬೆಂಗಳೂರು : ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ, ಹಚ್ ಮತ್ತು ವಕ್ಫ್ ಇಲಾಖೆಯಿಂದ ಪಿಹೆಚ್ ಡಿ, ಎಂ.ಫಿಲ್ ವ್ಯಾಸಂಗ ಮಾಡುತ್ತಿದ್ದಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಜೆ ಆರ್ ಎಫ್ ಮಾದರಿಯಲ್ಲಿಯೇ ಫೆಲೋಶಿಫ್ ನೀಡಲಾಗುತ್ತಿದೆ. ಪಿಹೆಚ್ ಡಿ ವ್ಯಾಸಂಗದ ವಿದ್ಯಾರ್ಥಿಗಳಿಗೆ 3 ವರ್ಷ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2 ವರ್ಷಕ್ಕೆ ಪ್ರತಿ ಮಾಹೆಯಾನ ರೂ.25 ಸಾವಿರ ಜೊತೆಗೆ ಪ್ರತಿ ವರ್ಷಕ್ಕೆ ಒಂದು ಬಾರಿಗೆ 10 ಸಾವಿರ ನೀಡಲಾಗುತ್ತಿತ್ತು. ಇದೀಗ ಇಂತಹ ಫೆಲೋಶಿಫ್ ಅನ್ನು 1 ಲಕ್ಷಕ್ಕೆ ಏರಿಕೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಸುಮಿತ್ರ ಅವರು, ದಿನಾಂಕ 24-01-2017ರ ಆದೇಶ ಭಾಗದಲ್ಲಿ ಪಿಹೆಚ್ ಡಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 3 ವರ್ಷ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಜೆಆರ್ ಎಫ್ ಮಾದರಿಯಲ್ಲಿ 2 ವರ್ಷಗಳ ಅವಧಿಗೆ ಮಾತ್ರ ಪ್ರತಿ ಮಾಹೆಯಾನ 25 ಸಾವಿರ ಮತ್ತು ಪ್ರತಿ ವರ್ಷಕ್ಕೆ ಒಂದು ಬಾರಿಗೆ 10 ಸಾವಿರ ನಿರ್ವಹಣಾ ವೆಚ್ಚವನ್ನು ಫೆಲೋಶಿಫ್ ನೀಡಲಾಗುತ್ತಿತ್ತು.
ಇದರ ಬದಲಾಗಿ ಪಿಹೆಚ್ ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 3 ವರ್ಷ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಜೆ ಆರ್ ಎಫ್ ಮಾದರಿಯಲ್ಲಿ 2 ವರ್ಷಗಳ ಅವಧಿಗೆ ಮಾತ್ರ ವಾರ್ಷಿಕ 1 ಲಕ್ಷ ನೀಡಲು ತಿದ್ದುಪಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಂದಹಾಗೇ ಇಂತಹ ಫೆಲೋಶಿಫ್ ಪಡೆಯಲು ವಿದ್ಯಾರ್ಥಿಗಳು ಪದವಿಯನ್ನು ನಿಗದಿಪಡಿಸಿದ ಅವಧಿಯೊಳಗೆ ಮುಗಿಸತಕ್ಕದ್ದು, ಅದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ನೀಡುವ ಪ್ರಮಾಣ ಪತ್ರವನ್ನು ಇಲಾಖೆಗೆ ಸಲ್ಲಿಸತಕ್ಕದ್ದು..
ಒಂದು ವೇಳೆ ವಿದ್ಯಾರ್ಥಿಯು ನಿಗದಿತ ಅವಧಿಯಲ್ಲಿ ಪದವಿಯನ್ನು ಮುಗಿಸದಿದ್ದರೇ, ಸರ್ಕಾರದಿಂದ ನೀಡಿದಂತಹ ಪ್ರೋತ್ಸಾಹಧನವನ್ನು ಹಿಂತಿರುಗಿಸತಕ್ಕದ್ದು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ.