Indian Constitution Development and Different Encrypet from 1973 to 1950

 ಭಾರತದ ಸಂವಿಧಾನದ ಬೆಳವಣಿಗೆ ಮತ್ತು ವಿವಿಧ ಶಾಸನಗಳ 1973 ರಿಂದ 1950 ರವರೆಗೆ :

ಭಾರತದಲ್ಲಿ ತಮ್ಮ ಸಾಮ್ರಾಜ್ಯ ಬೆಳೆದಂತೆ ಆಡಳಿತ ವ್ಯವಸ್ಥೆಯ ಸಮಸ್ಯೆಗಳು ಬ್ರಿಟಿಷರಿಗೆ ಎದುರಾದವು, ಈಸ್ಟ ಇಂಡಿಯಾ ಕಂಪನಿಯ ಆಡಳಿತದ ಬಗ್ಗೆ ಇಂಗ್ಲೆಂಡಿನಲ್ಲೂ ಸಾಕಷ್ಟೂ ಚರ್ಚೆ, ಟೀಕೆ ಕೇಳಿ ಬರುತ್ತಿತ್ತು. ಸಾಮ್ರಾಜ್ಯ ವಿಸ್ತಾರವಾದಂತೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿತ್ತು. ಭಾರತೀಯರ ಬೇಡಿಕೆಗಳಿಗೂ ಸ್ಪಂದಿಸಬೇಕಾಗಿತ್ತು. ಬ್ರಿಟಿಷರು ಹೀಗೆ ಕಾಲಕಾಲಕ್ಕೆ ಕೈಗೊಂಡ ಕಾನೂನು ಮತ್ತು ನಿಯಮಗಳು ಇಂದಿನ ಭಾರತೀಯ ಸಂವಿಧಾನದ ಬೆಳವಣಿಗೆಗೆ ಹಿನ್ನಲೆಯಾದವು.

# ರೆಗ್ಯುಲೇಂಟಿಂಗ ಶಾಸನ (1773) :

ಕ್ರಿ.ಶ. 1773 ರಲ್ಲಿ ಜಾರಿಗೆ ಬಂದ ಈ ಶಾಸನದಿಂದ ರಾಬರ್ಟ ಕ್ಲೈವ್ ಜಾರಿಗೊಳಿಸಿದ ದ್ವಿಮುಖ ಸರ್ಕಾರ ಪದ್ದತಿ ರದ್ದಾಯಿತು. ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ನಿಯಂತ್ರಿಸಲು ಅನೇಕ ನಿಬಂಧನೆಗಳನ್ನು ಜಾರಿಗೊಳಿಸಿತು.

(1) ಬಂಗಾಳದ ಗವರ್ನರ್ ಅನ್ನು ಭಾರತದ ಗವರ್ನರ್ ಜನರಲ್ ಎಂದು ಕರೆಯಲಾಯಿತು ಮದ್ರಾಸ್, ಬೊಂಬಾಯಿ, ಪ್ರಾಂತಗಳು ಇವನ ಅದೀನವಾದವು, ವಾರನ್ ಹೇಸ್ಟಿಂಗ್ ಭಾರತದ ಮೊದಲ ಗವರ್ನರ್ ಜನರಲ್ ಆದನು.

(2) ಗವರ್ನರ್ ಜನರಲ್‍ನ ಸಹಾಯಕ್ಕಾಗಿ ಸಲಹಾ ಸಮಿತಿಯಲ್ಲಿ 4 ಜನ ಸದಸ್ಯರನ್ನು ನೇಮಿಸಲಾಯಿತು.

(3) ಸರ್ವೋಚ್ಚ ನ್ಯಾಯಾಲಯವನ್ನು ಕಲ್ಕತ್ತೆಯಲ್ಲಿ ಸ್ಥಾಪಿಸಲಾಯ್ತು. (1773)

(4) ಸೆಕ್ರಟರಿ ಆಫ್ ಸ್ಟೇಟ್ ಎಂಬ ಭಾರತ ಮಂತ್ರಿಯನ್ನು ಇಂಗ್ಲೆಂಡಿನ ಪಾರ್ಲಿಮೆಂಟಿಗೆ ಜವಾಬ್ದಾರನಾಗಿರುವಂತೆ ಕಂಪನಿಯ ಉಸ್ತುವಾರಿಗೆ ನೇಮಿಸಿತು.

#ಕ್ರಿ.ಶ 1784 ರ ಫಿಟ್ಸ್ ಇಂಡಿಯಾ ಶಾಸನ :

(1) ಇಂಗ್ಲೇಂಡ್‍ನಲ್ಲಿ ಆರು ಜನ ಸದಸ್ಯರ ಒಂದು ಬೋರ್ಡ್ ಆಫ್ ಕಂಟ್ರೋಲ್ ಸ್ಥಾಪನೆಯಾಗಿ ಕಂಪನಿಯ ಆಡಳಿತದ ಮೇಲೆ ಹತೋಟಿ ಹೊಂದಿತು.

(2) ಗರ್ವನರ್ ಜನರಲ್‍ನ ಸಲಹಾ ಸಮಿತಿಯ ಸದಸ್ಯರನ್ನು ಮೂರಕ್ಕೆ ಇಳಿಸಲಾಯಿತು.

(3) ಈಸ್ಟ್ ಇಂಡಿಯಾ ಕಂಪನಿ ಬ್ರಿಟಿಷ್ ಸರ್ಕಾರದ ನಿಯಮಗಳಿಗೆ ಒಳಪಡುವಂತಾಯಿತು.

# ಕ್ರಿ..ಶ. 1813 ರ ಶಾಸನ:

ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಬ್ರಿಟಿಷ್ ಸರ್ಕಾರ ನೀಡಿದ್ದ ಸನ್ನದನ್ನು ಆಗಾಗ ನವೀಕರಿಸುತಿತದ್ದರು. ಇದರಿಂದ ಕ್ರಿ.ಶ. 1813ರಲ್ಲಿ ಸನ್ನದನು ನವೀಕರಿಸಿದಾಗ ಹೊಸ ನಿಯಮಗಳನ್ನು ರೂಪಿಸಿದರು.

(1) ಭಾರತ ಬ್ರಿಟಿಷ್ ಸಾಮ್ರಾಜ್ಯವು ಬ್ರಿಟಿಷ್ ಸಾರ್ವಭೌಮರ ಅದೀನಕ್ಕೆ ಒಳಪಟ್ಟಿದೆ ಎಂದು ತಿಳಿಸಿತು.

(2) ಕ್ರೈಸ್ತ ಮತ ಪ್ರಚಾರಕರ ಪ್ರವೇಶದ ಮೇಲೆ ಇದ್ದ ಪ್ರತಿಬಂಧವನ್ನು ತೆಗೆದು ಹಾಕಿ ಇಲ್ಲಿ ಶಾಲೆ, ಕಾಲೇಜುಗಳನ್ನು ಸ್ಥಾಪಿಸಲು ಮತ ಪ್ರಚಾರಕರಿಗೆ ಸಾಧ್ಯವಾಯಿತು.

(3) ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಭಾರತದಲ್ಲಿ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೆಂದು ನಿರ್ದೇಶನ ನೀಡಿತು.

# ಕ್ರಿ.ಶ. 1833ರ ಶಾಸನ;

(1) ಕಂಪನಿಯು ವ್ಯಾಪಾರ ಮಾಡದಂತೆ ನಿಷೀಧಿಸಲಾಯಿತು. ಕಂಪನಿಯು ರಾಜಕೀಯ ಅಧಿಕಾರವನ್ನು ಮಾತ್ರ ಚಲಾಯಿಸುವಂತಾಯಿತು

(2) ಸರ್ಕಾರಿ ಸೇವೆಯಲ್ಲಿ ವ್ಯಕ್ತಿಯ ಯೋಗ್ಯತೆ ಮತ್ತು ಅರ್ಹತೆಗನುಗುಣವಾಗಿ ಉದ್ಯೋಗಾವಕಾಶ ಕಲ್ಪಿಸುವ ಅವಕಾಶ ನೀಡಿತು.

(3) ಗರ್ವನರ್ ಜನರಲ್‍ನ ಸಲಹಾ ಸಮಿತಿಗೆ ಕಾನೂನು ಸದಸ್ಯನ ಸೇರ್ಪಡೆಯಾಯಿತು. ಥಾಮಸ್ ಬ್ಯಾಂಟಿಂಗ್‍ಟನ್ ಮೆಕಾಲೆ ಮೊದಲ ಕಾನೂನು ಸಲಹೆಗಾರನಾದನು. ಹೀಗೆ ಸದಸ್ಯರ ಸಂಖ್ಯೆ ಮತ್ತೆ ನಾಲ್ಕಾಯಿತು.

# ಕ್ರಿ.ಶ. 1853 ರ ಶಾಸನ;

ಈ ಶಾಸನ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಪರಿಣಾಮಕಾರಿ ಶಾಸಕಾಂಗವನ್ನು ಸೃಷ್ಟಿಸಿತು.

(1) ಕೆಂದ್ರದಲ್ಲಿ ಶಾಸನ ಸಭೆಯ ಸ್ಥಾಪನೆಯಾಯಿತು. ಗವರ್ನರ್ ಜನರಲ್‍ನ ಸಲಹಾ ಮಂಡಳಿಗೆ ಆರು ಜನ ಶಾಸಕ ಸದಸ್ಯರ ಸೇರ್ಪಡೆಯಾಯಿತು.(ಇದು ಇಂದಿನ ಪಾರ್ಲಿಮೆಂಟಿನ್ ಮೂಲ ರೂಪವಾಯಿತು)

(2) ಸರ್ಕಾರಿ ಸೇವೆ (ಸಿವಿಲ್ ಸರ್ವೀಸ್)ಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತರಲು ಅವಕಾಶ ನೀಡಲಾಯಿತು.

# ಕ್ರಿ.ಶ. 1858 ರ ಭಾರತ ಸರ್ಕಾರದ ಕಾನೂನು:

ಕ್ರಿ.ಶ. 1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತದ ಆಡಳಿತ ಬ್ರಿಟಿಷ್ ಪ್ರಭುತ್ವಕ್ಕೆ ಒಳಪಟ್ಟಿತು. ಈ ಶಾಸನ ಭಾರತದ ಉತ್ತಮ ಆಳ್ವಿಕೆಗೆ ಮಹತ್ವದ ಕೊಡುಗೆ ನೀಡಿದೆ.

(1) ಭಾರತದ ವ್ಯವಹಾರಗಳ ಕಾರ್ಯದರ್ಶಿಯ ನೆರವಿಗೆ 15 ಜನ ಸದಸ್ಯರನ್ನೊಳಗೊಂಡ ಭಾರತೀಯ ಸಮಿತಿಯ ಸ್ಥಾಪನೆಯಾಯಿತು.

(2) ಗವರ್ನರ್ ಜನರಲ್‍ನು ವೈಸರಾಯ್ ಎಂಬ ಪದನಾಮವನ್ನು ಹೊಂದಿ ರಾಣಿಯ ಅಧಿಕಾರದ ಪ್ರತಿನಿದಿಯಾದನು.

(3) ಕ್ರಿ.ಶ. 1858 ರಲ್ಲಿ ಬ್ರಿಟನ್ ವಿಕ್ಟೋರಿಯಾ ರಾಣಿ ಒಂದು ಗೋಷಣೆ ಹೊರಡಿಸಿ ದೇಶೀಯ ರಾಜರಿಗೆ ಮತ್ತು ಭಾರತದ ಜನತೆಗೆ ಬ್ರಿಟಿಷ್ ಸರ್ಕಾರದಿಂದ ನಿಷ್ಪಕ್ಷಪಾತ ನಡಾವಳಿಯ ಆಶ್ವಾಸನೆ ಇತ್ತಳು.

# ಕ್ರಿ.ಶ. 1909 ರ ಭಾರತದ ಕೌನ್ಸಿಲ್ ಆಕ್ಟ್(ಮಿಂಟೋ-ಮಾರ್ಲೆ ಸುಧಾರಣೆ) :

ಕ್ರಿ.ಶ. 1861 ಮತ್ತು ಕ್ರಿ.ಶ. 1891 ರ ಕೌನ್ಸಿಲ್ ಆಕ್ಟ್‍ಗಳು ಶಾಸಕಾಂಗದ ಅಧಿಕಾರವನ್ನು ಹೆಚ್ಚಿಸಿದವು ಸ್ಥಳೀಯ ಮಟ್ಟದಲ್ಲಿ ಚುನಾಯಿತ ನಗರಸಭೆಗಳನ್ನು ಆರಂಭಿಸಿವದವು. ಬ್ರಿಟಿಷ್ ಸರ್ಕಾರವು ಚುನಾಯಿತ ಭಾರತೀಯರಿಗೆ ಶಾಸನ ಸಭೆಗಳಲ್ಲಿ ಅವಕಾಶ ನೀಡಲು ಕ್ರಿ.ಶ. 1909 ರ ಶಾಸನ ಜಾರಿಗೆ ತಂದಿತು. ಭಾರತದ ವೈಸರಾಯ್ ಮಿಂಟೋ ಹಾಗೂ ಭಾರತ ವ್ಯವಹಾರಗಳ ಕಾರ್ಯದರ್ಶಿ ಮಾರ್ಲೆ ಈ ಶಾಸನವನ್ನು ರೂಪಿಸಿದರು. ಆಗ ಭಾರತದಲ್ಲಿ ನಡೆದಿದ್ದ ಚಳವಳಿಗಳಿಂದಾಗಿ ಈ ಬದಲಾವಣೆ ಬಂದಿತು.

1. ಇದು ಕೇಂದ್ರ ಶಾಸಕಾಂಗದ ವಿಸ್ತರಣೆಗ ಅವಕಾಶ ನೀಡಿತು. ಇದರ ಸದಸ್ಯರ ಸಂಖ್ಯೆ 16 ರಿಂದ 60 ಕ್ಕೆ ಏರಿತು.

2. ಪ್ರಾಂತಗಳ ಶಾಸನಸಬೆಯ ವಿಸ್ತಾರವಾಯಿತು. ಇಲ್ಲಿ ಚುನಾಯಿತರಿಗೂ ಅವಕಾಶವಾಯಿತು.

3. ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಏರ್ಪಡಿಸಿ ಪರಿಚಯಿಸಲಾಯಿತು.

# ಕ್ರಿ.ಶ 1919 ರ ಭಾರತ ಸರ್ಕಾರದ ಶಾಸನ :

ಭಾರತದ ಗನರ್ನರ್ ಜನರಲ್ ಚೆಮ್ಸಫರ್ಡ ಮತ್ತು ಭಾರತ ವ್ಯವಹಾಅಗಳ ಕಾರ್ಯದರ್ಶಿ ಮಾಟೆಂಗೂ ಇವರು ರೂಪಿಸಿದ ಸುಧಾರಣೆಗಳು ಇವಾಗಿವೆ.

1. ಭಾರತಕ್ಕೆ ಕ್ರಮೇಣ ಜವಾಬ್ದಾರಿ ಸರ್ಕಾರ ನೀಡುವುದು

2. ಸ್ವಯಂಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ದಿಯ ಆಶ್ವಾಸನೆ

3. ಭಾರತದ ವ್ಯವಹಾರಗಳ ಕಾರ್ಯದರ್ಶಿಯ ಅಧಿಕಾಅ ಮೊಟುಕುಗೊಳಿಸಿ ಭಾರತಕ್ಕೆ ಒಬ್ಬ ಹೈ ಕಮೀಷನರ್ ನೇಮಕ ಮಾಡಲಾಯಿತು.

4. ವೈಸರಾಯರ ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯ ಸದಸ್ಯರ ಸಂಖ್ಯೆ ಹೆಚ್ಚಿಸಲಾಯಿತು.

5. ಕೇಂಧ್ರದಲ್ಲಿ ಎರಡು ಸದನಗಳ ಶಾಸನ ಸಭೆ ರಚಿಸಿತು. ಅವೆಂದರೆ, ಮೇಲ್ಮನೆ(ಕೌನ್ಸಿಲ್ ಆಫ್ ಸ್ಟೇಟ್).ಇದರ ಅವದೀ ಮೂರು ವರ್ಷ, ಕೆಳಮನೆ ಅಥವಾ ಲೆಜಿಸ್ಲೇಟಿವ್ ಅಸೆಂಬ್ಲಿ, ಇದರ ಅವಧಿ ಐದು ವರ್ಷ (ಇವು ಕ್ರಮವಾಗಿ ರಾಜ್ಯಸಭೆ ಮತ್ತು ಲೋಕಸಭೆಗಳಿಗೆ ತಳಹದಿ ಹಾಕಿದವು)

6. ಆಡಳಿತ ಇಲಾಖೇಯಲ್ಲಿ ವಿಷಯಗಳನ್ನು ಕೇಂದ್ರಪಟ್ಟಿ (ರಕ್ಷಣೆ, ಅಂಚೆ ಮತ್ತು ತಂತಿ) ಮತ್ತು ರಾಜ್ಯಪಟ್ಟಿ(ಭೂ ಕಂದಾಯ, ಸ್ಥಳೀಯ ಸಂಸ್ಥೆ, ಅರಣ್ಯ ಇತ್ಯಾದಿ) ಎಂದು ವಿಂಗಡಿಸಲಾಯಿತು.

7. ಪ್ರಾತ್ಯಗಳಲ್ಲಿ ದ್ವಿಮುಖ ಸರ್ಕಾರ ಜಾರಿಗೊಳಿಸಲಾಯಿತು ಇದರಂತೆ ಆಡಳತ ಇಲಾಖೆಗಳಲ್ಲಿ ಮೀಸಲು ವಿಷಯ(ಹಣಕಾಸು ಪೋಲೀಸ್) ವರ್ಗಯಿತ ವಿಷಯ(ಅರಣ್ಯ ಶಿಕ್ಷಣ ಕಂದಾಯ, ಆರೋಗ್ಯ) ಜಾರಿಗೆ ಬಂದಿತು. ಗವರ್ನರ್ ಮತ್ತು ಆತನ ಕಾರ್ಯಕಾರಿ ಸಮಿತಿಗೆ ಮೀಸಲು ವಿಷಯಗಳ ಜವಾಬ್ದಾರಿ ಇತ್ತು. ಗವರ್ನರ್ ಮತ್ತು ಆತನ ಸಚಿವರು ವರ್ಗಾಯಿಸಲ್ಪಟ್ಟ ವಿಷಯಗಳ ಜವಾಬ್ದಾರಿ ಹೊಂದಿದ್ದರು. ಇದು ಭಾಗಶಃ ಜವಾಬ್ದಾರಿ ಸರಕಾರದ ಆರಂಭವಾಗಿತ್ತು.

# ಕ್ರಿ.ಶ. 1935 ರ ಭಾರತ ಸರ್ಕಾರದ ಶಾಸನ :

ಈ ಶಾಸನವು ಭಾರತದ ಸಂವಿಧಾನ ಅಚನೆಯಲ್ಲಿ ಬಹುಮುಖ್ಯವಾದ ದಾಖಲೆಯಾಗಿದೆ. ಇದು ಒಕ್ಕೂಟ ಪದ್ದತಿಗೆ ಅವಕಾಶ ಮಾಡಿತು. ಪ್ರಾಂತ್ಯಗಳ ಸ್ವಾಯತ್ತತೆಗೆ ಪ್ರಾಮುಖ್ಯತೆ ಕೊಟ್ಟಿತು. ಇದು ಸ್ವತಂತ್ರ ಭಾರತದ ರಾಜ್ಯಾಂಗಕ್ಕೆ ಆಧಾರವಾಗಿ ಪರಿಣಮಿಸಿದೆ.

1. ಈ ಶಾಸನವು ಬ್ರಿಟಿಷ್ ಇಂಡಿಯಾ, ರಾಜರುಗಳ ಆಳ್ವಿಕೆಗೆ ಒಳಪಟ್ಟ ಸಂಸ್ಥಾನಗಳು ಸೇರಿ ಒಂದು ಅಖಿಲ ಭಾರತ ಫೆಡರೇಷನ್ ರಚಿಸಲು ಸಹಾಯವಾಯಿತು.

2. ದೇಶೀಯ ಸಂಸ್ಥಾನ ಮತ್ತು ಪ್ರಾಂತಗಳ ಪರಿಮಿತಿಗೆ ಒಳಪಟ್ಟು ಒಂದು ಫೆಡರಲ್ ನ್ಯಾಯಾಲಯಕ್ಕೆ ಅನುಮತಿ ನೀಡಿತು.

3. ರಾಜ್ಯದಲ್ಲಿ ಜಾಡಿಯಲ್ಲಿದ್ದ ದ್ವಿಮುಖ ಸರ್ಕಾರ ರದ್ದುಗೊಳಿಸಿತು. (ದ್ವಿಮುಖ ಸರ್ಕಾರವನ್ನು ಕೇಂಧ್ರದಲ್ಲಿ ಜಾರಿಗೆ ತರಲಾಯಿತು). ಪ್ರಾಂತ ಸರಕಾರಗಳು ಸ್ವಾಯತ್ತವಾದವು.

4. ಈ ಶಾಸನವು ಆಡಳಿತದ ಇಲಾಖೆಗಳನ್ನು ಕೇಂಧ್ರಪಟ್ಟಿ, ರಾಜ್ಯಪಟ್ಟಿ ಮತ್ತು ಸಮವರ್ತಿ ಅಟ್ಟಿ ಎಂದು ಮುರು ಪಟ್ಟಿಗಳಿಗೆ ಅವಕಾಶ ನೀಡಿತು.

5. ಭಾರತದಲ್ಲಿ ರಿಸರ್ವ ಬ್ಯಾಂಕ್‍ನ್ನು ಸ್ಥಾಪಿಸಲಾಯಿತು.

# ಕ್ರಿ.ಶ. 1947 ರ ಭಾರತ ಸ್ವಾತಂತ್ರ್ಯದ ಶಾಸನ :

1. ಭಾರತ ದೇಶವು ಸ್ವತಂತ್ರವಾಯಿತು. ಆದರೆ ಅದು ಇಬ್ಬಾಗವಾಗಿ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ದೇಶಗಳು ಆಸ್ತಿತ್ವಕ್ಕೆ ಬಂದವು.

2. ಬ್ರಿಟಿಷ್ ಸರ್ಕಾರದ ಆಡಳಿತ ಭಾರತದಲ್ಲಿ ಅಂತ್ಯಗೊಂಡು ಭಾರತ ಅಥವಾ ಪಾಕಿಸ್ತಾನಕ್ಕೆ ಪ್ರಾಂತಗಳು ಸೇರಲು ಅವಕಾಶವಾಯಿತು.

3. ಭಾರತದ ಸಂವಿಧಾನ ರಚನೆಗೆ ಒಂದು ಸಭೆಯು ರೂಪುಗೊಂಡಿತು.

ಸಂವಿಧಾನ ಸಿದ್ದವಾಗುವ ತನಕ ಕ್ರಿ. ಶ 1947 ಆಗಸ್ಟ 15 ರಿಂದ ಕ್ರಿ.ಶ 1948 ರ ಜೂನ್‍ವರಗೆ ಮೌಂಟ್‍ಬ್ಯಾಟನ್ ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆದರು. ಮುಂದೆ ಕ್ರಿ.ಶ 1950 ಜನವರಿ 25 ರ ವರಗೆ ಚಕ್ರವರ್ತಿ ರಾಜಗೋಪಾಲಾಚಾರಿ ಭಾರತದ ಗವರ್ನಲ್ ಜನರಲ್ ಆಗಿದ್ದರು. ಆನವರಿ 26 ಕ್ಕೆ ಭಾರತವು ಗಣರಾಜ್ಯವಾಯಿತು. ಹೀಗಿದ್ದರೂ ಭಾರತವೂ ಕಾಮನ್‍ವೆಲ್ತಅ ಎಂಬ ಬ್ರಿಟನ್ನಿನ ಆಳ್ವಿಕೆಗೆ ಒಳಪಟ್ಟ ವಸಾಹತು ದೇಶಗಳ ಒಕ್ಕೂಟದಲ್ಲಿ ಸದಸ್ಯತ್ವ ಹೊಂದಿದೆ.

# ಸಂವಿಧಾನ ರಚನೆ :

ಸೆಪ್ಟಂಬರ್ ಕ್ರಿ.ಶ. 1946 ರಲ್ಲಿ ಪಂಡಿತ ನೆಹರೂರವರ ನೇತೃತ್ವದಲ್ಲಿ ಮಾಧ್ಯಮಾವಧಿ ಸರಕಾರದ ಸ್ಥಾಪನೆಯಾಯಿತು ಹಾಗೂ 308 ಸದಸ್ಯರಿರುವ ಸಂವಿಧಾನ ರಚಿಸಿಕೊಳ್ಳುವ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿತು. ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಡಾ|| ಬಾಬು ರಾಜೇಂದ್ರ ಪ್ರಸಾದರು ನೇಮಕವಾದರು. ಡಾ|| ಬಿ.ಆರ್. ಅಂಬೇಡ್ಕರ್ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಕರಡು ಸಂವಿಧಾನಕ್ಕೆ ಸಂವಿಧಾನ ಸಮಿತಿ ನವೆಂಬರ್ 26. ಕ್ರಿ.ಶ. 1949 ರಂದು ತನ್ನ ಅನುಮೋದನೆ ನೀಡಿತು. ಜನವರಿ 26 ಕ್ರಿ.ಶ. 1950 ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು. ಸ್ವಾತಂತ್ರ್ಯ ಸಂಗ್ರಾಮದ ಧ್ಯೇಓದ್ದೇಶಗಳು ಸಂವಿಧಾನದ ರೂಪುರೇಷೆ, ಸೈದ್ದಾಂತಿಕ ಗೊತ್ತುಗುರಿಗಳನ್ನು ರೂಪಿಸುವಲ್ಲಿ ತಳಹದಿಯಾಗಿವೆ.

# ಮುಖ್ಯ ಅಂಶಗಳು:

1. ಕ್ರಿ.ಶ. 1773 ರಲ್ಲಿ ಜಾರಿಗೆ ಬಂದ ರೆಗ್ಯುಲೇಟೀಂಗ್ ಶಾಸನದಿಂದ ರಾಬರ್ಟಕ್ಲೈವ್ ಜಾರಿಗೊಳಿಸಿದ ದ್ವಿಮುಖ ಸರ್ಕಾರ ಪದ್ದತಿ ರದ್ದಾಯಿತು.

2. ಕ್ರಿ.ಶ. 1784 ರ ಪಿಟ್ಸಸ ಇಂಡಿಯಾ ಶಾಸನದ ಪ್ರಕಾರ ಈಸ್ಟ ಇಂಡಿಯಾ ಕಂಪೆನೆ ಬ್ರಿಟಿಷ್ ಸರ್ಕಾರದ ನಿಯಮಗಳಿಗೆ ಒಳಪಡುವಂತಾಯಿತು.

3. ಕ್ರಿ. ಶ. 1813 ರ ಶಾಸನವು ಒಂದು ಲಕ್ಷ ರೂಪಾಯಿಗಳನ್ನು ಭಾರತದಲ್ಲಿ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೆಂದು ನಿರ್ದೇಶನ ನೀಡಿತು.

4. ಕ್ರಿ. ಶ.1853 ರ ಶಾಸನ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಪರಿಣಾಮಕಾರಿ ಶಾಸಕಾಂಗವನ್ನು ಸೃಷ್ಟಿಸಿತು.

5. ಕ್ರಿ. ಶ. 1858ರ ಭಾರತದ ಸರ್ಕಾರದ ಕಾನೂನು ಶಾಸನದ ಪ್ರಕಾರ ಭಾರತದ ಆಡಳಿತವು ಬ್ರಿಟಿಷ್ ಪ್ರಭುತ್ವಕ್ಕೆ ಒಳಪಟ್ಟಿತು.

6. ಕ್ರಿ. ಶ. 1909ರ ಭಾರತದ ಕೌನ್ಸಿಲ್ ಆಕ್ಟ್ ಶಾಸನಸಭೆಗಳ ವಿಸ್ತರಣೆ ಮತ್ತು ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ವ್ಯವಸ್ಥೆಯನ್ನು ಪರಿಚಯಿಸಿತು.

7. 1919 ರ ಭಾರತದ ಸರ್ಕಾರದ ಶಾಸನ ಪ್ರಾಂತಗಳಲ್ಲಿ ದ್ವಿಮುಖ ಸರ್ಕಾರವನ್ನು ಜಾರಿಗೊಳಿಸಿತು.

8. 1935 ರ ಭಾರತ ಸ್ವಾತಂತ್ರ್ಯ ಶಾಸನದ ಪ್ರಕಾರ ಭಾರತ ಸ್ವತಂತ್ರಗೊಂಡು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ದೇಶಗಳು ಆಸ್ತಿತ್ವಕ್ಕೆ ಬಂದವು.

9. ಜನವರಿ 26, 1950 ರಂದು ಭಾರತದ ಸಂವಿಧಾನವನ್ನು ಜಾರಿಗೊಳಿಸಲಾಯಿತು. ಭಾರತವು ಗಣರಾಜ್ಯವಾಯಿತು.

Tags : Importance of Indian Constitution , Notes